ಮಂಗಳೂರು ಸಿಸಿಬಿ ಪೋಲೀಸು ಇನ್ಸ್‌ಪೆಕ್ಟರ್ ಶ್ಯಾಮಸುಂದರ್ ಅವರು ತಮ್ಮ ಪಡೆಯೊಡನೆ ದಾಳಿ ಮಾಡಿ ಮೂರು ಪ್ರಕರಣಗಳಲ್ಲಿ ಮೂವರನ್ನು ಬಂಧಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಗಾಂಜಾ ಇತ್ಯಾದಿ ವಶಪಡಿಸಿಕೊಂಡರು.

ಬಂಬ್ರಾಣದ 24ರ ಕಿರಣ್‌ರಾಜ್ ಶೆಟ್ಟಿ ಆಂಧ್ರದಿಂದ ಗಾಂಜಾ ತಂದು ಮಂಗಳೂರು ಕಾಸರಗೋಡುಗಳಿಗೆಲ್ಲ ವಿತರಿಸುತ್ತಿದ್ದ. ಇವನನ್ನು ಬಂಧಿಸಿ ಆಂಧ್ರದಿಂದ ತರಿಸಿದ 27,000 ಕಿಲೋ ಗಾಂಜಾ ಮತ್ತು ಸಾಗಿಸುತ್ತಿದ್ದ ಕಾರು, ಮೊಬಾಯಿಲ್ ವಶಪಡಿಸಿಕೊಳ್ಳಲಾಗಿದೆ. ಒಟ್ಟು ಮೌಲ್ಯ ರೂ. 9,88,500.

ಮಂಗಳೂರಿನ ಬಂಟ್ಸ್ ಹಾಸ್ಟೆಲ್ ಬಳಿ ಅಪಾರ್ಟ್‌ಮೆಂಟಿನಲ್ಲಿ ಮಾದಕ ವಸ್ತು ವ್ಯವಹಾರ ನಡೆಸುತ್ತಿದ್ದ ಅಂತರದೇಶ ವ್ಯವಹಾರದ ನೀಲ್ ಕಿಶೋರಿ ಲಾಲ್ ರಾಮ್ ಜಿ ಶಾನನ್ನು ಕೂಡ ಸಿಸಿಬಿ ಪೋಲೀಸರು ಬಂಧಿಸಿದರು. ಈತನಿಂದ 2 ಕಿಲೋ ಗಾಂಜಾ, ಮೊಬಾಯಿಲ್, ಡಿಜಿಟಲ್ ತೂಕದ ಸಾಧನ ವಶಪಡಿಸಿಕೊಳ್ಳಲಾಗಿದೆ. ಇವುಗಳ ಒಟ್ಟು ಮೌಲ್ಯ ರೂ. 78,000.

ಮುಡಿಪು ಪಂಚಾಯತ್ ಸುತ್ತಿನಲ್ಲಿ ಎಂಡಿಎಂಪಿ ಮಾದಕ ಮಾತ್ರೆ ವ್ಯಾಪಾರ ನಡೆಸಿದ್ದ ಕೈರಂಗಳದ 35ರ ನವಾಜ್‌ನನ್ನು ಪೋಲೀಸರು ಬಂಧಿಸಿದರು. ಈತನಿಂದ 1,13,000 ರೂಪಾಯಿ ಮೌಲ್ಯದ ಮಾತ್ರೆ ಮತ್ತು ಮೊಬಾಯಿಲ್ ವಶಪಡಿಸಿಕೊಳ್ಳಲಾಗಿದೆ. ಮೂವರ ಮೇಲೂ ಹಿಂದೆಯೂ ಇಂತಾ ಪ್ರಕರಣಗಳು ಇದ್ದುದು ತಿಳಿದು ಬಂದಿದೆ.