ಮಂಗಳೂರು: ಬಂಟ ಸಮುದಾಯದ ಅತೀ ಪ್ರಾಮುಖ್ಯ ಬೇಡಿಕೆಯಾದ ಬಂಟ  ಸಮಾಜವನ್ನು ಪ್ರವರ್ಗ 2ಎ ಯಲ್ಲಿ ಸೇರ್ಪಡೆ ಸಹಿತ ಜಾಗತಿಕ ಬಂಟರ ಸಂಘಗಳ ಒಕ್ಕೂಟ ನಿರ್ಮಿಸುವ ನೂತನ ಕಟ್ಟಡಕ್ಕೆ  ಅನುದಾನ ಹಾಗೂ ಸಮಾಜಕ್ಕೆ ಸವಲತ್ತುಗಳನ್ನು ನೀಡುವಂತೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬೆಂಗಳೂರಿನಲ್ಲಿ ಮನವಿ ಸಲ್ಲಿಸಿದ್ದಾರೆ.

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ   ನಳಿನ್ ಕುಮಾರ್ ಕಟೀಲ್ ರವರ ಮುಂದಾಳತ್ವದಲ್ಲಿ  ಒಕ್ಕೂಟದ ಮಹಾದಾನಿಗಳಾದ  ಕನ್ಯಾನ ಸದಾಶಿವ ಶೆಟ್ಟಿ,   ಮಹಾನಿರ್ದೇಶಕ ತೋನ್ಸೆ ಆನಂದ ಶೆಟ್ಟಿ,  ಒಕ್ಕೂಟದ ನಿರ್ದೇಶಕ  ಶಶಿಧರ ಶೆಟ್ಟಿ ಬರೋಡ, ಒಕ್ಕೂಟದ ಉಪಾಧ್ಯಕ್ಷ   ಕರ್ನಿರೆ ವಿಶ್ವನಾಥ ಶೆಟ್ಟಿ, ಕೊಲ್ಲಾಡಿ ಬಾಲಕೃಷ್ಣ ರೈ  ಇವರನ್ನು ಒಳಗೊಂಡ ನಿಯೋಗವು  ಮುಖ್ಯಮಂತ್ರಿಗಳ ನಿವಾಸದಲ್ಲಿ ಭೇಟಿ ಮಾಡಿದೆ.

ಮೀಸಲಾತಿಯ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಒಕ್ಕೂಟದ ಪದಾಧಿಕಾರಿಗಳೊಂದಿಗೆ ವಿಸ್ತೃತವಾಗಿ ಚರ್ಚಿಸಿದರು.  ಒಕ್ಕೂಟದ ಬೇಡಿಕೆಗಳಿಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಸಕರಾತ್ಮಕವಾಗಿ ಸ್ಪಂದನೆ ನೀಡಿ, ಸರಕಾರದಿಂದ  ಬೇಡಿಕೆಯನ್ನು ಆದಷ್ಟು ಬೇಗ ಈಡೇರಿಸುವ ಭರವಸೆಯನ್ನು ನೀಡಿದರು.