ಸುರತ್ಕಲ್: ಮಕ್ಕಳೂ ತಮ್ಮ ಹಕ್ಕುಗಳ ಬಗ್ಗೆ ಸಾಮಾನ್ಯ ಜ್ಞಾನವನ್ನು ಹೊಂದಿರಬೇಕು, ಇಂದಿನ ಮಕ್ಕಳೇ ಮುಂದಿನ ಪ್ರಜೆಗಳಾಗಿರುವುದರಿಂದ ಭವಿಷ್ಯದಲ್ಲಿ ಸತ್ಪ್ರಜೆಗಳಾಗಿ ಬೆಳಗಲು ಸಮಾಜವು ಜಾಗೃತಿ ಮೂಡಿಸಬೇಕು, ಗ್ರಾಮ ಪಂಚಾಯತ್‌ನ ಮೂಲಕ ಅವರ ನೈತಿಕತೆಯ ಶಿಕ್ಷಣ ನೀಡುವ ಪ್ರಯತ್ನ ನಿಜಕ್ಕೂ ಶ್ಲಾಘನೀಯ ಎಂದು ಸಾಮಾಜಿಕ ಕಾರ್ಯಕರ್ತ ಯೋಗೀಶ್ ಮಲ್ಲಿಗೆಮಾರು ಹೇಳಿದರು.
ಅವರು ಬಾಳ ಗ್ರಾಮ ಪಂಚಾಯತ್‌ನಲ್ಲಿ ಮಕ್ಕಳ ಹಕ್ಕು ವಿಶೇಷ ಗ್ರಾಮ ಸಭೆಯಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಬಾಳ ಗ್ರಾಮ ಪಂಚಾಯತ್‌ನ ಅಧ್ಯಕ್ಷೆ ಹುಲಿಗಮ್ಮ ಅಧ್ಯಕ್ಷತೆಯನ್ನು ವಹಿಸಿದ್ದರು.
ಅಂಗನವಾಡಿ ಮೇಲ್ವಿಚಾರಕಿ ಅಶ್ವಿನಿ ಎಂ. ಕೆ., ಅವರು ಮಾತನಾಡಿ, ಮಕ್ಕಳ ಆರೋಗ್ಯಕ್ಕೆ ಪೂರಕವಾಗಿ ಅವರಿಗೆ ನೀಡುವ ಪೋಷಕಾಂಶದ ಆಹಾರದ ಜೊತೆಗೆ ಅಂಗನವಾಡಿ ಕೇಂದ್ರವಾಗಿರಿಸಿಕೊಂಡು ಪೋಷಕರು ಮಕ್ಕಳ ಬೆಳವಣಿಗೆಯಲ್ಲಿ ಕೇಂದ್ರವನ್ನು ಬಳಸಿಕೊಳ್ಳಬೇಕು ಎಂದರು.
ವಿಶೇಷವೇನೆಂದರೆ ಮಕ್ಕಳ ವಿಶೇಷ ಸಭೆಯು ಆರಂಭದಿಂದ ಕೊನೆಯವರೆಗೂ ಮಕ್ಕಳ ಮೂಲಕವೇ ನಡೆಸಿದ್ದು ವಿಶೇಷವಾಗಿತ್ತು, ವಿವಿಧ ಸ್ಪರ್ಧೆಗಳನ್ನು ಸಂಯೋಜಿಸಿ, ಅವರಿಗೆ ಬಹುಮಾನವನ್ನು ಪಂಚಾಯತ್‌ನಿಂದ ನೀಡಿ ಗೌರವಿಸಲಾಯಿತು, ಸಂಪನ್ಮೂಲ ವ್ಯಕ್ತಿ ಸಹಿತ ಅಧ್ಯಕ್ಷೆ, ಉಪಾಧ್ಯಕ್ಷೆ, ಸದಸ್ಯರು ಹಾಗೂ ಅಧಿಕಾರಿಗಳಿಗೆ ಮಕ್ಕಳ ತಮ್ಮ ಊರಿನ, ಶಾಲೆಯ ಸಮಸ್ಯೆಗಳನ್ನು ಹೇಳಿಕೊಂಡರು.
ಬಾಳ ಗ್ರಾಮ ಪಂಚಾಯತ್‌ನ ಉಪಾಧ್ಯಕ್ಷ ಶಂಕರ ಜೋಗಿ, ಪಿಡಿಒ ದೀಪಿಕಾ ಮಾತನಾಡಿದರು. ಬಾಳ ಗ್ರಾಮ ಪಂಚಾಯತ್‌ನ ಸದಸ್ಯರಾದ ಲೇಖನ, ಪುರುಷೋತ್ತಮ, ಸಾವ್ಯಾ, ರಂಜನಿ ಎಂ. ಮೂಲ್ಯ, ಲಕ್ಷ್ಮೀ ಉಪಸ್ಥಿತರಿದ್ದರು.
ವಿವಿಧ ಇಲಾಖೆಯ ಉಷಾ ಭಂಡಾರಿ, ದಿಲ್‌ಷಾದ್, ರಂಜಿತಾ, ಇಂದಿರಾ, ಜಯಶ್ರೀ, ಸುಚಿತಾ ವಿನಯ್, ಫಲಾಹರೆಶ್, ಮಮತಾ, ನಳಿನಾಕ್ಷಿ, ಶೈಲಜಾ ಮತ್ತಿತರರು ಸಹಕರಿಸಿದರು. ಪಂಚಾಯತ್‌ನ ಕಾರ್ಯದರ್ಶಿ ಲೋಕನಾಥ ಭಂಡಾರಿ ಪ್ರಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ವಿದ್ಯಾರ್ಥಿಗಳಾದ ಮಣಿಕಂಠ ಸಭೆಯ ಗೌರವ ಅಧ್ಯಕ್ಷತೆಯನ್ನು ವಹಿಸಿ, ಮಮತಾ ಸ್ವಾಗತಿಸಿ, ರೇವಣ್ಣ ಸಿದ್ಧಯ್ಯ ವಂದಿಸಿ, ಶರಣಮ್ಮ ಕಾರ್ಯಕ್ರಮ ನಿರೂಪಿಸಿದರು.