ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿ ಪೋಲೀಸರು ಹಣಕ್ಕೆ ಮಾಲಿಕನನ್ನೇ ಕೊಲೆ ಮಾಡಿದ್ದ ಮೂವರನ್ನು ಬಂಧಿಸಿದರು.

23ರ ಕಿರಣ ಸರಳೇಶ್ವರ್, 19ರ ನಿರಂಜನ ತಳವಾರ್, 19ರ ಗುಡ್ಡಪ್ಪ ತಿಲವಳ್ಳಿ ಬಂಧಿತರು. ಕೊಲೆಗೆ ಬಳಸಿದ ಎರಡು ಕಾರು ಮತ್ತು ಮೊಬಾಯಿಲ್‌ಗಳನ್ನು ಪೋಲೀಸರು ವಶಕ್ಕೆ ಪಡೆದುಕೊಂಡರು. ಹಾನಗಲ್ ಹೊಸಗೆಜ್ಜೆಹಳ್ಳಿಯ ಅಶೋಕ ಉಪ್ಪಾರ್ ಕೊಲೆಯಾದವರು. ಅವರ ಬೈಕನ್ನು ಕಾಡಿನಲ್ಲಿ ಪತ್ತೆ ಹಚ್ಚಲಾಗಿದೆ.