ಹಾಸನ ಲೋಕಸಭಾ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣ ಅವರ ಸಂಸತ್ ಸದಸ್ಯತ್ವ ರದ್ದು ಗೊಳಿಸಿದ್ದ ಉಚ್ಚ ನ್ಯಾಯಾಲಯದ ತೀರ್ಪಿಗೆ ಸರ್ವೋಚ್ಚ ನ್ಯಾಯಾಲಯವು ಮಧ್ಯಂತರ ತಡೆಯಾಜ್ಞೆ ನೀಡಿತು.

ಸೆಪ್ಟೆಂಬರ್ 1ರಂದು ಚುನಾವಣಾ ಅಕ್ರಮ ಮೊಕದ್ದಮೆಯಡಿ ಹೈಕೋರ್ಟಿನ ನ್ಯಾಯಮೂರ್ತಿ ಕೆ. ನಟರಾಜನ್ ಅವರು ಪ್ರಜ್ವಲ್‌ರ ಸದಸ್ಯತ್ವ ರದ್ದು ಮಾಡಿದ್ದರು. ಈ ಸಂಬಂಧ ಹಾಲಿ ಹಾಸನ ಸಂಸದರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.