ಅಶ್ವಯುಜ ಶುಕ್ಲ ಪಕ್ಷದ ಚತುರ್ಥಿ ತಿಥಿ ನವರಾತ್ರಿಯ ನಾಲ್ಕನೆಯ ದಿನ. ಈಕೆಯ ಉಪಾಸನೆಯಿಂದ ಎಲ್ಲಾ ರೀತಿಯ ರೋಗಗಳು ನಾಶವಾಗುತ್ತದೆ. ದೇವಿ ನಗುಮೊಗದಿಂದ ಬ್ರಹ್ಮಾಂಡವನ್ನು ಉತ್ಪನ್ನ ಮಾಡಿ ಪೊರೆಯುತ್ತಿದ್ದಾಳೆ. ಆದುದರಿಂದಲೇ ಆಕೆಯನ್ನು ಕೂಷ್ಮಾಂಡಾ ಎಂದು ಕರೆಯಲಾಗುತ್ತದೆ. 

ಈಕೆ ಅಷ್ಟಭುಜಧಾರಿಣಿ ಆಗಿದ್ದಾಳೆ. ತನ್ನ ಕೈಗಳಲ್ಲಿ ಕಮಂಡಲ, ಬಿಲ್ಲು-ಬಾಣ, ಕಮಲ, ಅಮೃತ ಕಲಶ, ಚಕ್ರ, ಗದೆಯನ್ನು ಹಿಡಿದಿದ್ದಾಳೆ. ಹಾಗೆಯೇ ಕೊರಳಲ್ಲಿ ಸಿದ್ಧಿ, ನಿಧಿಯನ್ನು ಕರುಣಿಸುವ ಮಾಲೆಯನ್ನು ಧರಿಸಿದ್ದಾಳೆ.

ಲೇಖನ ರಾಯಿ ರಾಜಕುಮಾರ ಮೂಡುಬಿದಿರೆ