ಲೇಖನ ರಾಯಿ ರಾಜಕುಮಾರ ಮೂಡುಬಿದಿರೆ
ಅಶ್ವಯುಜ ಶುಕ್ಲ ತೃತೀಯ ತಿಥಿಯ ನವರಾತ್ರಿಯ ಮೂರನೇ ದಿನ ದುರ್ಗೆಯ ಮೂರನೇ ರೂಪ "ಚಂದ್ರಘಂಟಾ" ದೇವಿ. ಈಕೆ ಶಾಂತಿದಾಯಕ ಮತ್ತು ಕಲ್ಯಾಣ ಕಾರಿ ದುರ್ಗೆಯ ಸ್ವರೂಪವಾಗಿದ್ದಾಳೆ.
ತಲೆಯ ಮೇಲೆ ಘಂಟೆಯ ಆಕಾರದ ಅರ್ಧಚಂದ್ರವನ್ನು ಧರಿಸಿರುವ, ಸುವರ್ಣ ಕಾಂತಿ ಹೊಂದಿರುವ ದೇವಿ ದಶಭುಜಧಾರಿಣಿ ಆಗಿರುವಳು. ಚಂದ್ರಘಂಟಾ ದೇವಿ ತನ್ನ ಕೈಯಲ್ಲಿ ಖಡ್ಗ, ಬಾಣ, ಬಿಲ್ಲು, ಕಮಂಡಲ, ಹೂವು, ಗಾದೆ, ತ್ರಿಶೂಲವನ್ನು ಹಿಡಿದುಕೊಂಡಿದ್ದಾಳೆ.