ಅಶ್ವಯುಜ ಶುಕ್ಲ ಪಕ್ಷ ಪಂಚಮಿ ತಿಥಿ ನವರಾತ್ರಿಯ ಐದನೇ ದಿನ ದುರ್ಗೆಯ ಐದನೇ ರೂಪ ಸ್ಕಂದ ಮಾತಾ ದೇವಿ. ಈಕೆ ಸೂರ್ಯ ಮಂಡಲದ ಏಕೈಕ ದೇವಿ. ಈಕೆಯ ತೊಡೆಯ ಮೇಲೆ ಕಾರ್ತಿಕ ಸ್ವಾಮಿ ವಿರಾಜಮಾನರಾಗಿದ್ದಾರೆ.
ಈಕೆ ಚತುರ್ಭುಜಳಾಗಿದ್ದು ಎರಡು ಕೈಗಳಲ್ಲಿ ಕಮಲ, ಮೂರನೇ ಕೈ ಅಭಯ ಮುದ್ರೆ, ನಾಲ್ಕನೇ ಕೈಯಿಂದ ಕಾರ್ತಿಕ ಸ್ವಾಮಿಯನ್ನು ಹಿಡಿದುಕೊಂಡಿದ್ದಾಳೆ.
ಸಿಂಹವನ್ನು ತನ್ನ ವಾಹನವನ್ನಾಗಿ ಹೊಂದಿದ್ದಾಳೆ.
ನವರಾತ್ರಿ ವೃತ ದಾರಿಗಳು ಕ್ರೋಧ, ಲೋಭ, ಮೋಹ ಇತ್ಯಾದಿ ದುಷ್ಟ ಪ್ರವೃತ್ತಿಯನ್ನು ತ್ಯಾಗ ಮಾಡಬೇಕು. ಬೆಳಗ್ಗೆ ದೇವಿಯ ಆವಾಹನೆ ಮಾಡಿ ಆರಾಧನೆ, ಪೂಜೆ, ಮಾಡಬೇಕು. ಫಲಾಹಾರ ಮಾತ್ರ ಸೇವಿಸಿ ಕ್ಷಮೆ, ದಯೆ, ಉದಾರತೆಯನ್ನು ಆಚರಿಸಿ ಭೂಮಿಯ ಮೇಲೆಯೇ ಮಲಗುವುದರಿಂದ ಇಷ್ಟಾರ್ಥ ಸಿದ್ಧಿ ಸಾಧ್ಯ ಎಂದು ಹೇಳಲಾಗಿದೆ.
ಲೇಖನ ರಾಯಿ ರಾಜಕುಮಾರ ಮೂಡುಬಿದಿರೆ