ಲೇಖನ ರಾಯಿ ರಾಜಕುಮಾರ ಮೂಡುಬಿದಿರೆ 

ಅಶ್ವಯುಜ ಶುಕ್ಲ ಪಕ್ಷದ ಸಪ್ತಮಿಯಂದು ನವರಾತ್ರಿಯ ಏಳನೇಯ ದಿನ. ಅಂದು ದುರ್ಗೆಯ ಏಳನೇ ರೂಪ ಕಾಲರಾತ್ರಿ ದೇವಿಯನ್ನು ಆರಾಧಿಸುವ ಪದ್ಧತಿ ಇದೆ.

ಈಕೆ ಅನಿಷ್ಟಗಳನ್ನು ದೂರಮಾಡಿ ಶುಭ ಫಲವನ್ನು ನೀಡುತ್ತಾಳೆ. ಈಕೆಯ ರೂಪ ಮಾತ್ರ ವಿಚಿತ್ರ: ಕೂದಲುಗಳನ್ನು ಸ್ವಚ್ಛಂದವಾಗಿ ಬಿಟ್ಟುದ್ದು, ಕತ್ತೆಯ ಮೇಲೆ ಕುಳಿತಿದ್ದಾಳೆ. ಉದ್ದನೆಯ ನಾಲಿಗೆ, ದೊಡ್ಡ ಕಿವಿ, ಎಣ್ಣೆ ಹಚ್ಚಿರುವ ಹೊಳೆಯುವ ಶರೀರ, ಎಡಗಾಲಿನಲ್ಲಿ ಮುಳ್ಳುಗಳ ಆಭರಣ, ಕೈಯಲ್ಲಿ ಧ್ವಜವನ್ನು ಹಿಡಿದಿರುವ, ಭಯಂಕರ ಕಾಲ ರಾತ್ರಿಯಂತೆ ಕಪ್ಪುಬಣ್ಣದ ರೂಪ ಹೊಂದಿದ್ದಾಳೆ.