ಲೇಖನ ರಾಯಿ ರಾಜಕುಮಾರ ಮೂಡುಬಿದಿರೆ
ಅಶ್ವಯುಜ ಶುಕ್ಲ ಅಷ್ಟಮಿ ದಿನ ನವರಾತ್ರಿಯ ಎಂಟನೇ ದಿನ. ಎಂಟನೆಯ ರೂಪವಾದ ಮಹಾಗೌರಿಯನ್ನು ಪೂಜಿಸಲಾಗುತ್ತದೆ. ಮಹಾ ಗೌರಿಯ ಪೂಜೆಯಿಂದ ಮನುಷ್ಯ ಪಾಪ ಮುಕ್ತನಾಗಿ ಅಕ್ಷಯ ಪುಣ್ಯವನ್ನು ಸಂಪಾದಿಸುತ್ತಾನೆ.
ಪಾರ್ವತಿಯ ರೂಪದಲ್ಲಿ ಘೋರ ತಪಸ್ಸನ್ನು ಭಗವಾನ್ ಶಂಕರನ ಪ್ರಾಪ್ತಿಗಾಗಿ ಮಾಡಿದ್ದರಿಂದ ಮಹಾ ಗೌರಿಯ ಸಂಪೂರ್ಣ ಶರೀರ ಕಪ್ಪಾಯಿತು ಎಂದು ಹೇಳಲಾಗುತ್ತದೆ. ಭಗವಾನ್ ಶಂಕರನ ಪ್ರಾಪ್ತಿಯ ನಂತರ ಆತನು ಮಹಾ ಗೌರಿಗೆ ಪವಿತ್ರ ಗಂಗಾಜಲದಿಂದ ಸ್ನಾನ ಮಾಡಿಸಿದ ಕಾರಣ ಆಕೆಗೆ ಗೌರ ವರ್ಣ ಪ್ರಾಪ್ತವಾಗಿ ಆಕೆಯನ್ನು "ಮಹಾ ಗೌರಿ" ಎಂದು ಕರೆಯುತ್ತಾರೆ.
ಮಹಾ ಗೌರಿ ಶುಭ್ರವಸ್ತ್ರ ಧರಿಸಿ, ಆಭರಣ ಭೂಷಿತೆಯಾಗಿದ್ದಾಳೆ. ಎತ್ತಿನ ಮೇಲೆ ಆರೂಢಳಾಗಿರುವ ಈಕೆ ಚತುರ್ಭುಜಧಾರಿಣಿ. ಮೇಲಿನ ಬಲಗೈಯಲ್ಲಿ ತ್ರಿಶೂಲ, ಕೆಳ ಬಲಗೈಯಲ್ಲಿ ವರಮುದ್ರೆ, ಮೇಲಿನ ಎಡಗೈಯಲ್ಲಿ ಅಭಯ ಮುದ್ರೆ, ಕೆಳ ಎಡಗೈಯಲ್ಲಿ ಡಮರು ಹೊಂದಿದ್ದಾಳೆ.