ಲೇಖನ ರಾಯಿ ರಾಜಕುಮಾರ ಮೂಡುಬಿದಿರೆ
ಅಶ್ವಯುಜ ಶುಕ್ಲ ಪಕ್ಷದ ನವಮಿಯ ನವರಾತ್ರಿಯ ಒಂಬತ್ತನೇ ದಿನ. ಈ ದಿನದಂದು ದುರ್ಗೆಯ ಒಂಭತ್ತನೇ ರೂಪವಾದ ಸಿದ್ಧಿದಾತ್ರಿ ದೇವಿಯನ್ನು ಆರಾಧಿಸುವ ಪದ್ಧತಿ. ಈಕೆಯ ಉಪಾಸನೆಯಿಂದ ಸಾಧಕರಿಗೆ ಅಷ್ಟಸಿದ್ಧಿ ಪ್ರಾಪ್ತವಾಗುತ್ತದೆ ಎಂದಿದೆ.
ಕಮಲದ ಮೇಲೆ ಕುಳಿತಿರುವ ಈಕೆ ಚತುರ್ಭುಜಳಾಗಿದ್ದಾಳೆ. ಶಂಖ, ಚಕ್ರ,ಗಧಾ, ಪದ್ಮ ಧಾರಿಣಿ. ಸಿದ್ಧ, ಗಂಧರ್ವ, ಯಕ್ಷ,ಅಸುರ, ದೇವ, ಇತ್ಯಾದಿ ಎಲ್ಲರಿಂದಲೂ ಸೇವೆ ಪಡೆಯುವ ಈಕೆ ಯಾವಾಗಲೂ ಸಿದ್ಧಿಯನ್ನು ನೀಡುವವಳು.