ಲೇಖನ ರಾಯಿ ರಾಜಕುಮಾರ ಮೂಡುಬಿದಿರೆ
ನವರಾತ್ರಿಯ 9 ದಿನ ದೇವಿಯ ಉಪಾಸನೆಯನ್ನು ಮಾಡುತ್ತೇವೆ. ಈ ದೇವಿಯೇ ಬ್ರಹ್ಮಾಂಡದ ಉತ್ಪತ್ತಿಯ ಶಕ್ತಿ. ಇದೇ ಚೈತನ್ಯದಾಯಕ ಶಕ್ತಿಯಿಂದಲೇ ಬ್ರಹ್ಮ, ವಿಷ್ಣು, ಮಹೇಶ್ವರನ ಜನನವು ಆಗಿದೆ. ಜನ್ಮ ನೀಡಿ, ಪಾಲನೆ ಪೋಷಣೆ ಮಾಡುವ ದೇವಿ ಶಕ್ತಿ ಸ್ವರೂಪಿಣಿ. ಈ ಜೀವಕ್ಕೆ ಶಕ್ತಿ ಇಲ್ಲದೆ ಹೋದರೆ ನಾವು ಶವವಾಗುತ್ತೇವೆ. ಶಿಷ್ಟರ ರಕ್ಷಣೆಗಾಗಿಯೇ ಆದಿಶಕ್ತಿ ಶಸ್ತ್ರ ಕೈಗೆತ್ತಿಕೊಂಡು ಕಾಪಾಡಿದ್ದಾಳೆ.
ವಿಜಯದಶಮಿ- ಶ್ರೀರಾಮ ರಾವಣನನ್ನು ಸಂಹರಿಸಿ ವಿಜಯ ಸಾಧಿಸಿದ ದಿನ. ಪಾಂಡವರು ಶಕ್ತಿ ಪೂಜೆ ಮಾಡಿ ಶಮಿ ಮರದಿಂದ ಆಯುಧಗಳನ್ನು ಮರಳಿ ಪಡೆದು ಕೌರವರ ಮೇಲೆ ವಿಜಯ ಸಾಧಿಸಿದ ದಿನ. ಗದ್ದೆಯಲ್ಲಿ ಬಿತ್ತಿ ಬೆಳೆದ ಬೆಳೆಯನ್ನು ಮನೆಗೆ ತರುವ ಸಡಗರದ ದಿನವೂ ವಿಜಯದಶಮಿ ಆಗಿರುವುದು ಕೆಲವಾರು ಕಡೆ ಕಂಡು ಬರುತ್ತದೆ.