ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ: ಫೆಬ್ರವರಿ 1, 2019 ರಂದು ಸಾಲ ಕೇಳದ, ಸಹಿ ಹಾಕಿ ಸಾಲ ಪಡೆಯದ ಗ್ರಾಹಕ ಅಲಂಗಾರು ಆಶ್ರಯ ಕಾಲೋನಿಯ ಎಚ್.ಪಿ. ಗ್ಯಾಸ್ ವಿತರಕ ಏಳನೇ ತರಗತಿ ಕಲಿತ ಕಿನ್ನಿ ಗೌಡರ ಮಗ ರಾಜೇಶ್ ಗೌಡರಿಗೆ ರೂ. 4,10,088 ಲಕ್ಷ ಸಾಲ ಮಂಜೂರು ಮಾಡಿತು. ಈ ಬಗ್ಗೆ ಗ್ರಾಹಕರು ಯಾವತ್ತೂ ಬ್ಯಾಂಕ್ ನ ಯಾರಲ್ಲೂ ಸಾಲಕ್ಕಾಗಿ ಬೇಡಿಕೆ ಸಲ್ಲಿಸಿರುವುದಿಲ್ಲ. ಹೀಗಿದ್ದ ಕಾರಣ ಸಾಲದ ಮೊತ್ತ ಅದೇ ಬ್ಯಾಂಕ್ ನಲ್ಲಿ ಹಾಗೆಯೇ ಇತ್ತು. ಆದರೆ ಬ್ಯಾಂಕ್ ನವರು ಪ್ರತೀ ತಿಂಗಳು ರಾಜೇಶ್ ಗೌಡರ ಖಾತೆಯಿಂದ ರೂ. 10,893 ನ್ನು ಸಾಲದ ಕಂತಾಗಿ ವಟಾಯಿಸುತ್ತಾ ಹೋಯಿತು. ಬ್ಯಾಂಕ್ ನ ತಿಳಿವಳಿಕೆ ಇಲ್ಲದ ರಾಜೇಶ್ ರ ಖಾತೆಯಲ್ಲಿ ಹಣ ಇಲ್ಲದಾಗ ನೋಟೀಸು ನೀಡಿದಾಗ ಎಲ್ಲಾ ವಿಚಾರ ಗ್ರಾಹಕರಿಗೆ ತಿಳಿಯಿತು. ತದನಂತರ ನಿರಂತರವಾಗಿ ಫೋನಾಯಿಸಿ, ಹೆದರಿಸುವ, ಗದರಿಸುವ, ಧಮಕಿ ಹಾಕುವ ಕಾರ್ಯಕ್ಕೆ ಬ್ಯಾಂಕ್ ಪ್ರಾರಂಭಿಸಿತು.
ನೊಂದ ರಾಜೇಶ್ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ 2023 ನವೆಂಬರ್ 17 ರಂದು ದೂರು ದಾಖಲಿಸಿದ್ದರು. ಆದರೆ ಬ್ಯಾಂಕ್ ನವರು ಮತ್ತೆ ಮತ್ತೆ ಗ್ರಾಹಕರು ಇಲ್ಲದಾಗ ಕೂಡಾ ಮನೆಯವರನ್ನು ಬೆದರಿಸಿ, ಗದರಿಸುವ ಪ್ರಕ್ರಿಯೆ ಪ್ರಾರಂಭ ಮಾಡಿದ ಕಾರಣ ಇದೀಗ ರಾಜೇಶ್ ದ.ಕ. ಜಿಲ್ಲಾ ಪೊಲೀಸ್ ಆಯುಕ್ತರ, ಮಂಗಳೂರು ಕಛೇರಿಯಲ್ಲಿ ಮೋಸ, ವಂಚನೆ ದೂರು ದಾಖಲಿಸಿ, ರಕ್ಷಣೆಗಾಗಿ ಮೊರೆ ಹೋಗಿದ್ದಾರೆ ಎಂದು ಮಾರ್ಚ್ 7 ರಂದು ಪತ್ರಿಕಾಗೋಷ್ಠಿಯಲ್ಲಿ ಎಲ್ಲಾ ದಾಖಲೆಗಳನ್ನು ಬಿಡುಗಡೆ ಮಾಡಿದರು.