ಮಂಗಳೂರು: ಭಾರತೀಯ ಜನತಾ ಪಾರ್ಟಿ ದ.ಕ.ಜಿಲ್ಲಾ ಕಾರ್ಯಕಾರಿಣಿ ಸಭೆಯು ಜುಲೈ 10, 2021 ರಂದು ಮಂಗಳೂರಿನ ಸಂಘುನಿಕೇತನದಲ್ಲಿ ನಡೆಯಿತು. ಜಿಲ್ಲಾ ಉಪಾಧ್ಯಕ್ಷರಾದ ಈಶ್ವರ ಕಟೀಲ್ ಸ್ವಾಗತಿಸಿದರು. ಸಭೆಯ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು ನೆರವೇರಿಸಿದರು. ಅಗಲಿದ ದಿವ್ಯ ಚೇತನರಿಗೆ ಶೃದ್ಧಾಂಜಲಿಯನ್ನು ಜಿಲ್ಲಾ ಉಪಾಧ್ಯಕ್ಷರಾದ ರಾಧಾಕೃಷ್ಣ ಬೂಡಿಯಾರ್ ರವರು ಸಮರ್ಪಿಸಿದರು.
ಕೊರೋನಾ ಸಾಂಕ್ರಾಮಿಕ ರೋಗವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿರುವ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಅಭಿನಂಧನಾ ನಿರ್ಣಯ ಮಂಡನೆಯನ್ನು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುದೀರ್ ಶೆಟ್ಟಿ ಮಂಡಿಸಿದರು.
ಸಮಾರೋಪ ಭಾಷಣದಲ್ಲಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ರವರು ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತ ಬರೀ ರಾಜಕೀಯ ಕಾರ್ಯಕರ್ತರಲ್ಲ ಸಮಾಜದ ಮತ್ತು ದೇಶದ ಬಗ್ಗೆ ಚಿಂತನೆ ಮಾಡುವ ಕಾರ್ಯಕರ್ತ ಯಾವತ್ತೂ ಕೂಡ ಅಧಿಕಾರ ದಾಹಕೋಸ್ಕರ ಕೆಲಸ ಮಾಡುವುದಿಲ್ಲ. ನಮ್ಮ ಪಕ್ಷದ ಕಾರ್ಯಕರ್ತ ಜನಪ್ರತಿನಿಧಿಯನ್ನು ಗೆಲ್ಲಿಸಿಕೊಡುವುದು ಮಾತ್ರವಲ್ಲ ಸಂಕಷ್ಟದ ಸಮಯದಲ್ಲಿ ಕೆಲಸವನ್ನು
ಸಮರ್ಥವಾಗಿ ನಿರ್ವಹಿಸಲು ಶಕ್ತರಾಗಿದ್ದಾರೆ. ನಮ್ಮ ಕಾರ್ಯಕರ್ತರ ಬದ್ದತೆಯನ್ನು, ಆದರ್ಶಗಳನ್ನು ಗುರಿಯಾಗಿಟ್ಟುಕೊಂಡು ರಾಷ್ಟ್ರ ಚಿಂತನೆಯ ಗುರಿಯೊಂದಿಗೆ ಬೇರೆ ಬೇರೆ ಪಾರ್ಟಿಯಿಂದ ಗಣ್ಯರು ಕಾರ್ಯಕರ್ತರು ತಂಡೋಪತಂಡವಾಗಿ ನಮ್ಮ ಪಾರ್ಟಿಯನ್ನು ಸೇರಿಕೊಳ್ಳುತ್ತಿದ್ದಾರೆ ಎಂದರು.
ಆರ್ಥಿಕ ಪ್ರಕೋಷ್ಠದ ಸಂಚಾಲಕರಾಗಿ ಶಾಂತರಾಮ ಶೆಟ್ಟಿ, ಸಹ ಸಂಚಾಲಕರಾಗಿ ಎಸ್ ಎಸ್ ನಾಯಕ್, ಪ್ರಕಾಶನ ಪ್ರಕೋಷ್ಠ ಸಂಚಾಲಕರಾಗಿ ಸುಜೀತ್ ರಾಜ್ ಮೀನ, ಸಹ ಸಂಚಾಲಕರಾಗಿ ಅನಿದಿತ್ ಗೌಡ ರನ್ನು ನೇಮಿಸಲಾಯಿತು. ಕೋವಿಡ್ ನಿಂದ ಮೃತಪಟ್ಟ ಶವ ಸಂಸ್ಕಾರವನ್ನು ನೆರವೇರಿಸಿದ ಮಂಗಳೂರಿನ ಪಾಲಿಕೆ ಸದಸ್ಯರಾದ ಗಣೇಶ ಕುಲಾಲ್, ಪುತ್ತೂರು ನಗರ ಮಂಡಲದ ಅಧ್ಯಕ್ಷರಾದ ಜಗನ್ನೀವಾಸ್ ರಾವ್ ರವರನ್ನು ಅಭಿನಂದಿಸಲಾಯಿತು. ವೇದಿಕೆಯಲ್ಲಿ ವಿಭಾಗ ಪ್ರಭಾರಿಯಾದ ಉದಯ ಕುಮಾರ್ ಶೆಟ್ಟಿ, ಜಿಲ್ಲಾ ಸಹ ಪ್ರಭಾರಿಯಾದ ರಾಜೇಶ್ ಕಾವೇರಿ, ಮಂಗಳೂರು ನಗರ ದಕ್ಷಿಣ ಶಾಸಕರಾದ ವೇದವ್ಯಾಸ್ ಕಾಮತ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅದ್ಯಕ್ಷತೆಯನ್ನು ಜಿಲ್ಲಾಧ್ಯಕ್ಷರಾದ ಸುದರ್ಶನ ಮೂಡಬಿದರೆ ವಹಿಸಿದರು. ದನ್ಯವಾದವನ್ನು ಜಿಲ್ಲಾ ಕಾರ್ಯದರ್ಶಿ ಧನಲಕ್ಷ್ಮೀಜನಾರ್ಧನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಸ್ತೂರಿ ಪಂಜ ಕಾರ್ಯಕ್ರಮವನ್ನು ನಿರೂಪಿಸಿದರು. ವಿಭಾಗ ಸಂಘಟನ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಕುಮಾರ್ ಬೆಳ್ತಂಗಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ ಉಪಸ್ಥಿತರಿದ್ದರು.
ಕಾಂಗ್ರೇಸ್‍ನ ಕಾರ್ಯ ವೈಖರಿಯಿಂದ ಬೇಸತ್ತು ಪ್ರಸ್ತುತ ಗ್ರಾಮ ಪಂಚಾಯತ್ ಸದಸ್ಯರಾದ ಸಚಿನ್ ಅಡಪ, ಉದಯ ಭಟ್, ಲೋಲಾಕ್ಷ, ಮೂಡಬಿದಿರೆಯ ಸತೀಶ್ ಸಾಲಿಯಾನ್, ಬೆಂಬಲಿಗರೊಂದಿಗೆ ಭಾರತೀಯ ಜನತಾ ಪಾರ್ಟಿಗೆ ಸೇರ್ಪಡೆಗೊಂಡರು.