ಫ್ರಾನ್ಸಿನ ಕಾಲ್ಚೆಂಡು ನಿಯತಕಾಲಿಕೆ ನೀಡುವ ಬ್ಯಾಲನ್ ಡಿಓರ್ ಪ್ರಶಸ್ತಿಯನ್ನು ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ 7ನೇ ಬಾರಿ ಮತ್ತು ಮಹಿಳಾ ವಿಭಾಗದಲ್ಲಿ ಸ್ಪೆಯಿನ್‌ನ ಅಲೆಕ್ಸಿಯಾ ಪುಟೆಲ್ಲಾ ಪ್ರಶಸ್ತಿ ವಿಜೇತರಾದರು.
ಮಹಿಳಾ ವಿಭಾಗದಲ್ಲಿ 3 ವರುಷಗಳಿಂದ ಮಾತ್ರ ಪ್ರಶಸ್ತಿ ನೀಡುತ್ತಿದ್ದು, ಕಳೆದೆರಡು ವರುಷಗಳಲ್ಲಿ ಅದಾ ಟಿಗರ್‌ಬರ್ಗ್ ಮತ್ತು ಮೆಗಾನಾ ರಾಪಿನೋ ಪ್ರಶಸ್ತಿ ಗೆದ್ದಿದ್ದರು.
ಮೆಸ್ಸಿ ಅವರು 2009ರಿಂದ 2019ರವರೆಗೆ 6 ಬಾರಿ ಬ್ಯಾಲನ್ ಡಿಓರ್ ಗೆದ್ದಿದ್ದು, ಇದು ಏಳನೆಯದಾಗಿದೆ. ಅರ್ಜೆಂಟೀನಾ ಕೋಪಾ ಲೋಕ ಕಪ್ ಗೆಲುವು ಈ ಬಾರಿ ಮತ್ತೆ ಮೆಸ್ಸಿ ಹೆಸರೇರಿಸಿದೆ. ಲಿವಂಡೋಸ್ಕಿ ಮತ್ತು ಜಾರ್ಗಿನ್‌ಹೊ 6 ಬ್ಯಾಲನ್ ಡಿಓರ್ ದಾಖಲೆ ಪತನವಾಯಿತು.