ಬಂಟ್ವಾಳ: ಸರ್ವ ಧರ್ಮವೂ ಶ್ರೇಷ್ಠವಾದುದು. ಅದು ಎಲ್ಲರನ್ನೂ ಒಗ್ಗೂಡಿಸುತ್ತದೆ. ಉತ್ಸವಗಳ ಉದ್ದೇಶ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಿದೆ. ದೇಶ ಬೆಳೆಯಬೇಕಾದರೆ ಪ್ರಜ್ಞಾವಂತ ಪ್ರಜೆಗಳು ಅಭಿವೃದ್ಧಿಯಾಗಬೇಕು ಎಂದು ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಅವರು ಬಂಟ್ವಾಳ ತಾಲೂಕಿನ ತುಂಬೆಯ ಫಾದರ್ ಮುಲ್ಲರ್ ಆಸ್ಪತ್ರೆ ಬಳಿ ತುಂಬೆ ಗ್ರೌಂಡ್ಸ್ ನಲ್ಲಿ ಎ. 11 ರಿಂದ ಎ. 13 ರ ವರೆಗೆ ನಡೆಯಲಿರುವ ತುಂಬೆ ಫೆಸ್ಟ್ -2025 ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿ ಮಾತನಾಡಿದರು.
ಮೊಡಂಕಾಪು ಇನ್ಫೆಂಟ್ ಜೀಸಸ್ ಚರ್ಚ್ ನ ಧರ್ಮಗಿರುಗಳಾದ ರೆ. ಫಾ. ವಲೇರಿಯನ್ ಡಿಸೋಜ ಮುಖ್ಯಅತಿಥಿಯಾಗಿ ಮಾತನಾಡಿ ಭಾರತ ಮಾತೆಯ ಮಕ್ಕಳೆಲ್ಲಾ ಒಂದೇ ಎಂಬ ಭಾವನೆ ಬೆಳೆದು ಮಾನವೀಯತೆಯನ್ನು ರೂಢಿಸಿಕೊಳ್ಳಬೇಕೆಂದರು.
ಅಲ್ ಹಾಜ್ ಕೆ.ಪಿ.ಇರ್ಷಾದ್ ದಾರಿಮಿ ಮಿತ್ತಬೈಲ್ ಅತಿಥಿಯಾಗಿ ಉಪಸ್ಥಿತರಿದ್ದರು. ಅತಿಥಿಗಳನ್ನು ಚೆಂಡೆವಾದನದೊಂದಿಗೆ ಸಭಾವೇದಿಕೆಗೆ ಸ್ವಾಗತಿಸಲಾಯಿತು.
ಫೆಸ್ಟ್ ಸಂಯೋಜಕರಾದ ಬಿ.ಎಂ.ಅಶ್ರಫ್, ತುಂಬೆ ಬಿ.ಎ.ಗ್ರೂಪ್ ಎಂ.ಡಿ. ಬಿ.ಅಬ್ದುಲ್ ಸಲಾಂ, ಐಟಿಐ ಕಾಲೇಜಿನ ಪ್ರಾಂಶುಪಾಲ ನವೀನ ಕುಮಾರ್ ಕೆ.ಎಸ್. ಪಿಯು ಕಾಲೇಜು ಪ್ರಾಂಶುಪಾಲ ಸುಬ್ರಹ್ಮಣ್ಯ ಭಟ್ ಶಿಕ್ಷಕರಾದ ಜಗದೀಶ ರೈ, ಸಾಯಿ ರಾಮ್ ,ದಿನೇಶ್ ಶೆಟ್ಟಿ ಮೊದಲಾದವರಿದ್ದರು.
ಮೇಳದಲ್ಲಿ ಯೇನೆಪೋಯ ಮಹಿಳಾ ಆರೋಗ್ಯ ಸಂಚಾರಿ ಆಸ್ಪತ್ರೆಯ ವತಿಯಿಂದ ಆರೋಗ್ಯ ತಪಾಸಣೆ, ತೋಟಗಾರಿಕಾ ಇಲಾಖೆಯ ಯಂತ್ರೋಪಕರಣ ಪ್ರದರ್ಶನ, ಸಿರಿಧಾನ್ಯ ಮಾರಾಟ, ಸ್ತ್ರೀ ಶಕ್ತಿ ಸಂಘಟನೆಯ ವಿವಿಧ ಮಳಿಗೆಗಳು ಗಮನ ಸೆಳೆದವು. ಯೇನೆಪೋಯ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನಗೊಂಡಿತು.