ಕನ್ನಡದ ಮೊದಲ ಪತ್ರಿಕೆ ಮಂಗಳೂರು ಸಮಾಚಾರ ಮೊದಲುಗೊಂಡು ಬಾಸೆಲ್ ಮಿಶನ್ ಪ್ರಕಟಣೆಗಳೆಲ್ಲ ಒಂದು ಶತಮಾನದಷ್ಟು ಕಾಲ ಮಾರಾಟಗೊಂಡ ಮೂಲೆಯಿದು. ಈಗ ಬರಿದು ಬಿದ್ದಿದೆ.
1958ರವರೆಗೆ ಹಂಪನಕಟ್ಟೆಯ ಈ ಮೂಲೆಯ ಅಂಗಡಿಯಲ್ಲಿ ಬಾಸೆಲ್ ಮಿಶನ್ ಪ್ರಕಟಿತ ಕೃತಿಗಳು ಎಲ್ಲವೂ ದೊರೆಯುತ್ತಿದ್ದವು. ಅನಂತರ ಬಾಸೆಲ್‌ನವರ ಸಾರ್ವಜನಿಕ ಪ್ರಕಟಣೆಗಳು ಕಡಿಮೆ ಆದವು. ನಾನಾ ಬಗೆಯ ಪತ್ರಿಕೆಗಳು ಹೆಚ್ಚಿದವು. ಹಾಗಾಗಿ ಬಾಸೆಲ್ ಮಿಶನ್ ಈ ಅಂಗಡಿ ಮುಚ್ಚಿತು. ಅವರ ಪ್ರಕಟಣೆಗಳು ಅವರ ಪ್ರೆಸ್ ಆವರಣದಲ್ಲಿಯೇ ದೊರೆಯತೊಡಗಿದವು.
ಈ ಮೂಲೆ ಅಂಗಡಿ ರಿಪೇರಿ ಕಂಡು ಪೆನ್ ಅಂಗಡಿ ಆಗಿತ್ತು. 63 ವರುಷ ಇಲ್ಲಿ ಇದ್ದ ಆ ಅಂಗಡಿ ಎರಡು ತಲೆಮಾರು ದಾಟಿದ ಮೇಲೆ ಈಗ ಅಲ್ಲೇ ಬೇರೆ ಅಂಗಡಿ ಹೊಕ್ಕಿದೆ. ಮಂಗಳೂರು ನಗರವೆಂದರೆ ಬಾಸೆಲ್ ನೆನಪು ನೀಡದ ಜಾಗ ಎಲ್ಲಿದೆ?
-By ಪೇಜಾ