ರಾಜಸ್ತಾನದ ಆರು ಜಿಲ್ಲೆಗಳ 1,564 ಪಂಚಾಯತ್ ಸಮಿತಿ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿತು. ಆದರೆ ಬಿಜೆಪಿ ಹೋರಾಟದ ಗೆಲುವು ಕಂಡಿದೆ.

ಮೂರು ಹಂತದಲ್ಲಿ ಮತದಾನ ನಡೆದು, ಶನಿವಾರ ಆರಂಭವಾದ ಮತ ಎಣಿಕೆ ಭಾನುವಾರ ಅಂತಿಮ ಫಲಿತಾಂಶ ಪ್ರಕಟವಾಯಿತು.

598 ವಾರ್ಡ್‌ಗಳಲ್ಲಿ ಕಾಂಗ್ರೆಸ್, 490 ವಾರ್ಡ್‌ಗಳಲ್ಲಿ ಬಿಜೆಪಿ,  250 ವಾರ್ಡ್‌ಗಳಲ್ಲಿ ಪಕ್ಷೇತರರು ಜಯ ಗಳಿಸಿದ್ದಾರೆ.

ಉಳಿದಂತೆ ಆರ್‌ಎಲ್‌‌ಪಿ 39, ಬಿಎಸ್‌ಪಿ 10, ಎನ್‌ಸಿಪಿ 2 ಕಡೆ ಗೆಲುವು ಸಾಧಿಸಿವೆ.