ಅಖಿಲ ಭಾರತ ಯುವಜನ ಒಕ್ಕೂಟ, ಸಮದರ್ಶಿ ವೇದಿಕೆ, ಕರ್ನಾಟಕ ಥಿಯೋಲಾಜಿಕಲ್ ಇನ್‌ಸ್ಟಿಟ್ಯೂಟ್ ಸೇರಿಗೆಯಲ್ಲಿ ಬಾಸೆಲ್ ಮಿಶನ್ ಸಹೋದಯ ಹಾಲ್‌ನಲ್ಲಿ 2020ರ ರಾಷ್ಟ್ರೀಯ ಶಿಕ್ಷಣ ನೀತಿ ಒಳಿತಾಗುವುದೇ ಎಂಬ ವಿಚಾರ ಸಂಕಿರಣ ನಡೆಯಿತು.
ಕರ್ನಾಟಕ ಥಿಯಾಸಾಫಿಕಲ್ ಇನ್ಸ್ಟಿಟ್ಯೂಟ್‌ನ ಪ್ರಾಂಶುಪಾಲರಾದ ಎಚ್. ಎಂ. ವಾಟ್ಸನ್ ಅವರು ಬರಗೂರು ರಾಮಚಂದ್ರಪ್ಪ ಮೊದಲಾದವರು ಬರೆದ ರಾಷ್ಟ್ರೀಯ ಶಿಕ್ಷಣ ನೀತಿಯ ಪುಸ್ತಕವನ್ನು ಬಿಡುಗಡೆ ಮಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಮ್ಮ ಸಂಸ್ಥೆಯ ಮೊಗ್ಲಿಂಗ್, ಕಿಟ್ಟೆಲ್ ಅವರುಗಳು ಕನ್ನಡ ಮತ್ತು ಶಿಕ್ಷಣಕ್ಕೆ ಸಲ್ಲಿಸಿದ ಸೇವೆಯ ಬಗೆಗೆ ವಿವರಿಸಬೇಕಾಗಿಲ್ಲ ಎಂದು ವಾಟ್ಸನ್ ಹೇಳಿದರು. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತಜ್ಞರ ಇಲ್ಲವೇ ಜನರೊಡನೆ ತರಾತುರಿಯಿಂದ ಜಾರಿಗೊಳಿಸಲಾಗಿದೆ ಎಂದು ಅವರು ಹೇಳಿದರು.
ಪುರುಷೋತ್ತಮ ಬಿಳಿಮಲೆಯವರು ಕರ್ನಾಟಕ ರಾಜ್ಯ ಮಾತ್ರ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡಿದೆ. ಕೆಲವೇ ಸಾವಿರ ಜನರ ಸಂಸ್ಕೃತ ಭಾಷೆಗೆ ಸಾವಿರಾರು ಕೋಟಿ ರೂಪಾಯಿ ವೆಚ್ಚವಾದರೆ, ಆರು ಕೋಟಿ ಕನ್ನಡಿಗರಿಗೆ ಆರು ಕೋಟಿ ವೆಚ್ಚವಾಗಿದೆ. ಸಂತಾಲ ಭಾಷೆಯು ತನ್ನದೇ ಲಿಪಿ ಕಂಡುಕೊಂಡು ಜನಸಂಖ್ಯೆಯ ಸಹಿತ ಅಭಿವೃದ್ಧಿ ಕಂಡಿದೆ. ಆದರೆ ತುಳು ಮೊದಲಾದ ಭಾಷೆಗಳು ಅನುಕೂಲ ಪಡೆಯಲು ಸಾಧ್ಯವಾಗಿಲ್ಲ ಎಂದರು.
ಡಾ. ನಿರಂಜನಾರಾಧ್ಯ ಮಾತನಾಡಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ನಿಮ್ಮ ಮುಚ್ಚಿದ ಕಾರ್ಯಸೂಚಿಯಂತೆ ಮಾಡುವಂತಿಲ್ಲ. ಜನರ ಗಮನವನ್ನು ಗೊಂದಲಗೊಳಿಸಿದರೆ ನಿಮ್ಮ ದಾರಿ ಸುಲಭ ಎಂಬುದು ನಿಮ್ಮ ಗುರಿಯು, ಯಾರಿಗೂ ಗೊತ್ತಿಲ್ಲದ ಚೌಕಟ್ಟಿನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸಂವಿಧಾನದ ಮೂಲ ಚೌಕಟ್ಟು ಅಳವಡಿಸಲಾಗಿಲ್ಲ. ಹಾಗಾಗಿ ಅದು ಜನಪರ ಅಲ್ಲ ಎಂದು ಅವರು ಹೇಳಿದರು.
ಅಧ್ಯಕ್ಷತ ವಹಿಸಿದ್ದ ಸಿದ್ದನಗೌಡ ಪಾಟೀಲರು ನಡುವೆ ಅಭಿಪ್ರಾಯ ವ್ಯಕ್ತಪಡಿಸಿ, ಗೋಲ್ವಾಲ್ಕರ್ ಮೊದಲೇ ಸಂಸ್ಕೃತ ಬರುವವರೆಗೆ ಹಿಂದಿ ಇರಲಿ. ಒಂದು ದೇಶ, ಒಂದು ಭಾಷೆ, ಒಬ್ಬ ನಾಯಕ ಎಂದಿದ್ದಾರೆ. ಅದೇ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಉದ್ದೇಶ ಎಂದರು.
ಡಾ. ಸುಕುಮಾರ ಅವರು ಮಾತನಾಡಿ ರಾಷ್ಟ್ರೀಯ ಶಿಕ್ಷಣ ನೀತಿಯು ಶುದ್ಧ ಸುಳ್ಳು ಮತ್ತು ಗೌಪ್ಯವಾದುದು. ಅದಕ್ಕೆ ಸಾಂವಿಧಾನಿಕ ಆಶಯವೇ ಇಲ್ಲ. ಅದು ಮನುಸ್ಮೃತಿಯ ಸಾರ ಎಂದರೆ ಈ ಶಿಕ್ಷಣ ನೀತಿಯಿಂದ ಖಂಡಿತ ಒಳಿತು ಆಗುವುದಿಲ್ಲ. ಅದು ಸಂಘಿ ಒಳ ನೀತಿ ಎಂದು ಹೇಳಿದರು. ಮೋದಿ ದೇವರನ್ನು ಎದುರು ಹಾಕಿಕೊಳ್ಳಲು ನ್ಯಾಯಾಧೀಶರೇ ತಯಾರಿಲ್ಲ. ಈ ಎನ್‌ಇಪಿ ಜನರಿಗಲ್ಲ, ಶಿಕ್ಷಣದ ಅಆ ಇಈ ಗೊತ್ತಿಲ್ಲದ ಬಿಜೆಪಿ ಸರಕಾರಕ್ಕೆ, ಇದರಿಂದ ದೇಶಕ್ಕೆ ಖಂಡಿತ ಒಳಿತಾಗುವುದಿಲ್ಲ ಎಂದು ಅವರು ಹೇಳಿದರು.
ಬಾಯ್ಮುಚ್ಚು ಕಯ್ಕಟ್ಟು ಎಂಬುದಕ್ಕೆ ಈ ನೀತಿ ಪೂರಕ ಎಂದೂ ಅವರು ಹೇಳಿದರು.
ಡಾ. ಶ್ರೀನಿವಾಸ ಕಕ್ಕಿಲ್ಲಾಯ ಮಾತನಾಡಿ, ಎನ್‌ಇಪಿಯ ಪ್ರತಿ ಪುಟದಲ್ಲೂ ಮೌಲ್ಯದ ಮಾತು. ಯಾರ ಮೌಲ್ಯ? ಗಾಂಧಿ ಜಯಂತಿ ಸ್ವಚ್ಚತಾ ದಿನ, ಗಣರಾಜ್ಯೋತ್ಸವ ದಿನವನ್ನು ಬಸಂತ ಪಂಚಮಿ ಹೀಗೆ ಎಲ್ಲವನ್ನೂ ತಿರುಚುವ ಕೆಲಸ ಇವರದು. ಆರೋಗ್ಯದ ಬಗೆಗೆ ಪಂಚ ತಂತ್ರ ಕಲಿಸುವ, ಯೋಗ ಮಾಡಿಸುವುದೇ ಇವರ ಮುಖ್ಯ ಉದ್ದೇಶ. ಸಂವಿಧಾನ ವಿರೋಧಿ ಶಿಕ್ಷಣ ನೀತಿಯಿದು ಎಂದು ಅವರು ಹೇಳಿದರು.
ಅನಂತರ ಈ ನಿಟ್ಟಿನಲ್ಲಿ ನಿರಂತರ ಚರ್ಚೆ ಮತ್ತು ಪ್ರಶ್ನೋತ್ತರಗಳು ನಡೆದವು.