ಮೂಡುಬಿದ್ರಿ: 2022 ರ ಡಿಸೆಂಬರ್ ನಲ್ಲಿ ನಡೆದ ಸಿ ಎ ಫೌಂಡೇಶನ್ ಪರೀಕ್ಷೆಯಲ್ಲಿ ಆಳ್ವಾಸ್ ಪದವಿ ಪೂರ್ವ ಹಾಗೂ ಪದವಿ ಕಾಲೇಜು ಅತ್ಯುತ್ತಮ ಫಲಿತಾಂಶ ಪಡೆದು ದಾಖಲೆಯನ್ನು ಸಾಧಿಸಿದೆ.
ರಾಷ್ಟ್ರಮಟ್ಟದಲ್ಲಿ ನಡೆದ ಪರೀಕ್ಷೆಯಲ್ಲಿ ಆಳ್ವಾಸ್ ಕಾಲೇಜಿನ 128 ವಿದ್ಯಾರ್ಥಿಗಳಲ್ಲಿ 10 ವಿದ್ಯಾರ್ಥಿಗಳು ಉತೀರ್ಣಗೊಂಡಿದ್ದಾರೆ. ರಾಷ್ಟ್ರಮಟ್ಟದಲ್ಲಿ ಶೇ. 29.25 ಫಲಿತಾಂಶ ದಾಖಲಾಗಿದ್ದರೆ, ಆಳ್ವಾಸ್ ಶೇ.75.78 ಫಲಿತಾಂಶ ಗಳಿಸಿದೆ. 10 ವಿದ್ಯಾರ್ಥಿಗಳಲ್ಲಿ ಆಸ್ಟರ್ ಲೇನ್ ಡಿಸೋಜಾ, ಅನ್ವಿತಾ ಆರ್. ಶೆಟ್ಟಿ, ಸೋಹನ್ ಕುಮಾರ್, ಬ್ರಯನ್ ಪಿಂಟೊ, ಡೆಚ್ಚಮ್ಮ, ಧನುಷ್, ಪ್ರದೀಪ್ ಎಚ್, ಎಂ ಸನ್ನಿಲಾಯ್ಡ್ ಮಿರಾಂಡಾ, ಎಂ ಸ್ವಾತಿ ಮತ್ತು ವಿಜ್ಞೇಶ್ ವಿ ಸಾಲಿಯಾನ್ ಉತಮ ಸ್ಥಾನ ಪಡೆದಿದ್ದು 97 ವಿದ್ಯಾರ್ಥಿಗಳು ತಮ್ಮ ಮೊದಲನೆಯ ಪ್ರಯತ್ನದಲ್ಲೇ ಉತೀರ್ಣರಾಗಿ ಸಾಧನೆ ಮಾಡಿದ್ದಾರೆ ಎಂದು ಆಳ್ವಾಸ್ ಎಜುಕೇಶನ್ ಫೌಂಡೇಶನ್ ಅಧ್ಯಕ್ಷ ಡಾ| ಎಂ. ಮೋಹನ ಆಳ್ವಾ ರವರು ತಿಳಿಸಿದ್ದಾರೆ.
ಪದವಿ ಕಾಲೇಜಿನ ಪ್ರಾಚಾರ್ಯ ಡಾ| ಕುರಿಯನ್, ಸಂಯೋಜಕ ಅನಂತಶಯನ, ಪದವಿ ಪೂರ್ವ ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂ. ಡಿ ಉಪಸ್ಥಿತರಿದ್ದರು.