ಪ್ರೊಫೆಸರ್ ಡಾ. ಮೋಹನ್ ಬಿ ಅವರು ಬರೆದ ಬಸವಣ್ಣ ಮತ್ತು ನಾರಾಯಣ ಗುರುಗಳು ಒಂದು ತೌಲನಿಕ ಅಧ್ಯಯನ ಎಂಬ ಪುಸ್ತಕವು ಫೆಬ್ರವರಿ 5ರಂದು ಕುದ್ರೋಳಿ ಗೋಕರ್ಣನಾಥೇಶ್ವರ ಸಭಾಂಗಣದಲ್ಲಿ ಬಿಡುಗಡೆ ಆಯಿತು. ಹಿರಿಯ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿಯವರು ಇತರರೊಂದಿಗೆ ಸೇರಿ ಪುಸ್ತಕ ಬಿಡುಗಡೆ ಮಾಡಿದರು.

ಮುದ್ದು ಮೂಡುಬೆಳ್ಳೆ ಮತ್ತು ಮೋಹನ್ ಅವರು ಕೃತಿಯ ಬಗೆಗೆ ಒಂದೆರಡು ಸಾಲು ಮಾತನಾಡಿದರು. ಸನಿಲ್ ನಿರೂಪಿಸಿದರು. ನಾರಾಯಣ ಗುರುಗಳ ಬಿಳಿ ಬಟ್ಟೆ ಗುರುಗಳು,  ಅವರನ್ನು ಕೇಸರಿ ಬಟ್ಟೆಯಲ್ಲಿ ಮುಖ ಪುಟಗಳಲ್ಲಿ ತೋರಿಸುವ ಚಾಳಿ ಹೋಗಬೇಕು. ಇಲ್ಲೇ ಪ್ರದರ್ಶನಗೊಂಡ ಶೂದ್ರ ಶಿವ ನಾಟಕದಲ್ಲಿ ನಾರಾಯಣ ಗುರುಗಳು ಶುಭ್ರ ಬಿಳಿಯ ಬಟ್ಟೆಯಲ್ಲೇ ಕಾಣಿಸಿಕೊಂಡರು.

ಪುಸ್ತಕ ಬಿಡುಗಡೆ ಮಾಡಿದ ಹಿರಿಯ ನಾಯಕ ಜನಾರ್ದನ ಪೂಜಾರಿ, ಮಾಲತಿ ಪೂಜಾರಿ ಮೊದಲಾದವರು.