ಬೆಂಗಳೂರು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘದ ಪ್ರಜ್ಯೋತಿ ಸಮಾವೇಶವು ನವೆಂಬರ್ 30 ರಂದು ಕಾಲೇಜು ಸಭಾಭವನ ಭಾವಪ್ರಕಾಶ ದಲ್ಲಿ ಅದ್ದೂರಿಯಾಗಿ ನಡೆಯಿತು.

ಬೆಂಗಳೂರಿನ ಪ್ರಶಾಂತಿ ಆಯುರ್ವೇದ ಸಂಸ್ಥೆಯ ಮುಖ್ಯಸ್ಥ ಡಾ ಗಿರಿಧರ ಕಜೆಯವರು ಮುಖ್ಯ ಅತಿಥಿಗಳಾಗಿ ಆಯುರ್ವೇದದ ಹಿರಿಮೆಯ ಬಗ್ಗೆ ಹಾಗೂ ದಶoಬರ್  ಕೊನೆಯ ವಾರದಲ್ಲಿ ಬೆಂಗಳೂರಿನಲ್ಲಿ ನಡೆಯುವ ವಿಶ್ವ ಆಯುರ್ವೇದ ಸಮ್ಮೇಳನದ ಪೂರ್ಣ ಮಾಹಿತಿ ನೀಡಿದರು.

ಇನ್ನೋರ್ವ ಮುಖ್ಯ ಅತಿಥಿ ಮಂಗಳೂರಿನ ಕಣಚೂರು ಆಯುರ್ವೇದ ಕಾಲೇಜಿನ ಮುಖ್ಯ ಸಲಹೆಗಾರ ಡಾ ಸುರೇಶ ನೆಗಳಗುಳಿ ಅವರು ಪ್ರಜ್ಯೋತಿ ಪತ್ರಿಕೆ ಲೋಕಾರ್ಪಣೆ ಮಾಡಿ ಹಳೇವಿದ್ಯಾರ್ಥಿಗಳಿಗೆ ತಮ್ಮ ಸಂಸ್ಥೆಗೆ ನೀಡುವ ಭೇಟಿ ಹೊಸ ಚೈತನ್ಯ ನೀಡುವುದಾಗಿ ಹೇಳಿದರು.

ಇದೇ ವೇಳೆ ಡಾ. ಪೂರ್ಣಿಮಾ ಭಟ್ ಬರೆದ ಕನ್ನಲಿಯ ಕನಾ ಕನಾ ಎಂಬ ವೈದ್ಯೆಯ ಹಳ್ಳಿ ಅನುಭವ ಕಥನ - ಮಿನಿ ಕಥೆಗಳ ಸಂಕಲನವನ್ನು ಸಹ ಲೋಕಾರ್ಪಣೆ ಮಾಡಲಾಯಿತು.

ಇವರಲ್ಲದೆ ಸಭಾಧ್ಯಕ್ಷತೆ ವಹಿಸಿದ್ದ  ಪ್ರಜ್ಯೋತಿ ಅಧ್ಯಕ್ಷ ಪುತ್ತೂರಿನ ಡಾ. ಶಶಿಧರ ಕಜೆ  ಸಾಂದರ್ಭಿಕವಾಗಿ ಮಾತನಾಡಿದರು. ಕಾಲೇಜು ಪ್ರಾಚಾರ್ಯೆ ಡಾ ಮಮತಾ ಅವರು ಮಾತನಾಡಿ ಸಂಸ್ಥೆಯ ಸಾಧನೆಗಳನ್ನು ವಿವರಿಸಿದರು, ಕಾರ್ಕಳದ ಡಾ ಭರತೇಶ್,  ಡಾ ರವಿ ರಾವ್, ಡಾ ನಾಗರಾಜ್, ಡಾ ವ್ಯಾಸರಾಯ ತಂತ್ರಿ ಮತ್ತಿತರರು ವೇದಿಕೆಯಲ್ಲಿದ್ದರು.

ಡಾ ಕೆ ಆರ್ ರಾಮಚಂದ್ರ, ಡಾ ಕೆ ಎಲ್ ಉಪಾಧ್ಯ, ಡಾ ಶ್ರೀಕಾಂತ್ ಯು, ಡಾ ಮುರಳಿಧರ ಶರ್ಮ, ಡಾ ಗಿರಿಧರ ಕಂಠಿ, ಡಾ ಬಾಲಕೃಷ್ಣ ಭಟ್ ಡಾ ಕೃಷ್ಣ ಗೋಖಲೆ, ಡಾ ಪ್ರಭಾಕರ ಉಪಾಧ್ಯಾಯ, ಡಾ ನಾರಾಯಣ ಅಂಚನ್  ಮತ್ತಿತರರು ಭಾಗವಹಿಸಿದ್ದರು.

ಭೋಜನ ನಂತರದ ಕಾರ್ಯಕ್ರಮದಲ್ಲಿ ಡಾ ಮುರಳೀಧರ ಶರ್ಮ ಹಾಗೂ ಡಾ ಶ್ರೀಕಾಂತ್ ಯು ಅವರ ಸುಧೀರ್ಘ ಸೇವೆಯ ದ್ಯೋತಕವಾಗಿ ಹಳೇವಿದ್ಯಾರ್ಥಿಗಳಿಂದ ಗುರುವಂದನಾ ಸಮಾರಂಭದಲ್ಲಿ ಶಾಲು ಪೇಟ ಹಾರ ಫಲ ಪುಷ್ಪ ಸಹಿತ ಗೌರವಿಸಲಾಯಿತು.

ಡಾ ಶರ್ಮ ಅವರು ಮಾತನಾಡುತ್ತಾ ತಾನು ಏನು ಮಾಡಿದ್ದೇನೆ ಎಂದು ಗೊತ್ತಿಲ್ಲ ಆದರೆ ನನ್ನ ಮೂಲಕ ಒಂದಷ್ಟು ಪ್ರಯೋಜನ ಆಗಿದ್ದರೆ ಅದು ನನ್ನ ಕರ್ತವ್ಯ ಅಂದುಕೊಳ್ಳುವೆ ಎಂದರು.

ಡಾ ಶ್ರೀಕಾಂತ್ ಯು ಅವರು ತಾವು ಡಾ ಆರ್ ಆರ್ ಭಟ್ ಅವರ ಒತ್ತಡದ ಮೇರೆಗೆ ವೈದ್ಯನಾದೆ. ಅದೇ ರೀತಿ ಅಧ್ಯಾಪಕನೂ ಅದೆ. ಮಾತೃ ಸಂಸ್ಥೆಗೆ ಸೇವೆ ಸಲ್ಲಿಸುವ ಭಾಗ್ಯ ಪಡೆದೆ ಎಂದರು