ಮುಂಬಯಿಯ ಭಿವಂಡಿಯಲ್ಲಿ ಮದುವೆಯ ಬಾಡೂಟದ ವೇಳೆ ಪೆಂಡಾಲಿನ ಒಂದು ಮೂಲೆಯ ಸ್ಟೋರ್ ರೂಮಿಗೆ ಬೆಂಕಿ ಬಿದ್ದು ಉರಿದರೂ ರುಚಿಕರ ಊಟ ಬಿಟ್ಟು ಯಾರೂ ಮೇಲಳದೆ ಕವಳ ಕತ್ತರಿಸಿದ್ದು ಸುದ್ದಿಯಾಗಿದೆ.
ರಾತ್ರಿ 10 ಗಂಟೆಯ ವೇಳೆ, ಮದುವೆಯ ಗರ್ನಾಲ್ ಬಡಿದು ಸ್ಟೋರ್ ರೂಮಿಗೆ ಬೆಂಕಿ ಬಿದ್ದಿತ್ತು. ಈಚೆ ಪೆಂಡಾಲಲ್ಲಿ ಊಟ ಮಾಡುತ್ತಿದ್ದವರು ಅದಕ್ಕೂ ನಮಗೂ ಸಂಬಂಧ ಇಲ್ಲ ಎಂಬಂತಿದ್ದರು. ಬೆಂಕಿ ಆರಿಸಿದ ಅಗ್ನಿಶಾಮಕ ದಳದವರು ಈ ಊಟದ ಧೀರರ ಫೋಟೋ ಪೋಸ್ಟ್ ಮಾಡಿದ್ದಾರೆ.