ಬ್ರಹ್ಮಾವರ: ನಮ್ಮ ಶಾಲೆಗಳಲ್ಲಿ ಎಲ್ಲಾ ಮಾತೃಭಾಷೆ ಮಾತಾನಾಡುವ ವಿದ್ಯಾರ್ಥಿಗಳು ಇರುತ್ತಾರೆ. ಪಠ್ಯವಾಗಿ ರಾಜ್ಯ ಭಾಷೆ ಕನ್ನಡ ಕಲಿಸಿದರೂ ಅವರವರ ಮಾತೃ ಭಾಷೆಗೆ ಮಹತ್ವ ನೀಡಿದರೆ ಸೌಹಾರ್ದದಿಂದ ಜೀವಿಸುವ ಪಾಠವನ್ನು ತನ್ನಿಂತಾನೆ ಕಲಿಸಿದಂತೆ ಆಗುತ್ತದೆ ಎಂದು ಕೊಂಕಣಿ ಭಾಷಾ ಮಂಡಳ ಕರ್ನಾಟಕ ಇದರ ಕಾರ್ಯದರ್ಶಿ ರೇಮಂಡ್ ಡಿಕೂನಾ ತಾಕೊಡೆ ನುಡಿದರು.

ಅವರು ಉಡುಪಿಯ ಬ್ರಹ್ಮಾವರದ ನಿರ್ಮಲ ಆಂಗ್ಲ ಮಾದ್ಯಮ ಶಾಲೆಯಲ್ಲಿ ಕೊಂಕಣಿ ದಿನಾಚರಣೆಯನ್ನು ಆಚರಣೆಗೆ ದೀಪವನ್ನು ಬೆಳಗಿಸಿ ಮಾತನಾಡುತ್ತಿದ್ದರು.

ಕರಾವಳಿಯಲ್ಲಿ ಕನ್ನಡ, ಕೊಂಕಣಿ, ತುಳು, ಬ್ಯಾರಿ, ಇಂಗ್ಲಿಷ್ ಐದು ವ್ಯವಹಾರದ ಭಾಷೆಗಳು ತಿಳಿದಿರಲೇಬೇಕು. ಅದರ ಜೊತೆಯಲ್ಲಿ ಇತರ ಮಾತೃಭಾಷೆಯ ಜನರು ನಮ್ಮ ಶಾಲೆಯಲ್ಲಿ ಇದ್ದಾಗ ಸೌಹಾರ್ದ ಕಲಿಯಲು ಸಹಜ ವಾತಾವರಣ ಇರಬೇಕು ಎಂದರು.

ಶಾಲಾ ಸಂಚಾಲಕರಾದ ಫಾದರ್ ಜೋನ್ ಫೆರ್ನಾಂಡೀಸ್ ಅಧ್ಯಕ್ಷತೆ ವಹಿಸಿ  ಮಾತನಾಡಿ, ಎಲ್ಲಾ ವಿದ್ಯಾರ್ಥಿಗಳು ನಮ್ಮ ಮನೆಯ ಮಕ್ಕಳ ಹಾಗೆ ಅವರ ಶ್ರೇಯಾಂಕವನ್ನು ನೋಡಿ ದೇಶದ ಉತ್ತಮ ಪ್ರಜೆಗಳು ಮಾಡುವುದು ಶಿಕ್ಷಣದ ಜವಾಬ್ದಾರಿ ಎಂದರು.

ಪ್ರಾಂಶುಪಾಲರಾದ ಫಾ. ಮತಾಯಸ್ ಡಾಯಸ್ ಮಾತನಾಡಿ, ಎಲ್ಲಾ ಮಾತೃಭಾಷೆ ನಮಗೆ ದೇಶ ಕಟ್ಟುವ ಸಾಧನೆಯ ಭಾಗವಾಗಿದೆ ಎಂದರು.

ಕೊಂಕಣಿ ಪದ್ಯಗಳು ಮತ್ತು ನೃತ್ಯಗಳನ್ನು ವಿದ್ಯಾರ್ಥಿಗಳು ಪ್ರದರ್ಶನ‌ ಮಾಡಿದರು.

ಮುಖ್ಯ ಆತಿಥಿಯಾದ ಗ್ರೆಟ್ಟಾ ಡಿಸೋಜ ‌ಕೊಂಕಣಿ ಬಗ್ಗೆ ಮಾಹಿತಿಯನ್ನು ನೀಡಿದರು.

ಮೊದಲಿಗೆ ರೊಯ್ಟನ್ ಡಿಸೋಜ ಸ್ವಾಗತಿಸಿ, ಪ್ರೀತಮ್ ಡಿಸೋಜ ವಂದಿಸಿದರು, ಪ್ರಿನ್ಸಿಯಾ ನಿರೂಪಿಸಿದರು. 

ಚರ್ಚಿನ ಗೌರವಾನ್ವಿತರು ಹಾಗೂ ಶಿಕ್ಷಕರು ಸಹಕರಿಸಿದರು.