ರಾಜಸ್ತಾನದ ಸದರ್‌ಶಹರದಲ್ಲಿ ಕಾಂಗ್ರೆಸ್ಸಿನ ಅನಿಲ್ ಕುಮಾರ್ ಶರ್ಮಾ ಮತ್ತು ಛತ್ತೀಸಗಡದ ಭಾನು ಪ್ರತಾಪಪುರದದಲ್ಲಿ ಕಾಂಗ್ರೆಸ್ಸಿನ ಸಾವಿತ್ರಿ ಮನೋಜ್ ಗೆಲುವು ಸಾಧಿಸಿದ್ದಾರೆ. ಒಡಿಶಾದ ಪದಮ್‌ಪುರದಲ್ಲಿ ಬಿಜು ಜನತಾ ದಳದ ಬರ್ಷ್ ಸಿಂಗ್ ಬರಿಹಾ ಗೆಲುವು ಕಂಡಿದ್ದಾರೆ.

image courtesy 

ಬಿಹಾರದ ಕುರ್ಹಾನಿಯಲ್ಲಿ ಬಿಜೆಪಿ ಮತ್ತು ಜೆಡಿಯು ಮತಗಳ ಅಂತರ ತೀರಾ ಕಡಿಮೆ ಇದ್ದು ಫಲಿತಾಂಶ ಬಿಜೆಪಿ ಪರ ಎಂದು ಊಹಿಸಲಾಗಿದೆ. ಉತ್ತರ ಪ್ರದೇಶದ ಖತೌಲಿಯಲ್ಲಿ ಎಸ್‌ಪಿಯ ಮಿತ್ರ ಪಕ್ಷ ರಾಷ್ಟ್ರೀಯ ಲೋಕ ದಳದ ಮದನ್ ಭೈಯಾ ಗೆದ್ದಿದ್ದಾರೆ. ಬಿಜೆಪಿಯ ಈ ಸ್ಥಾನ ಕಸಿದರೂ ಲಾಭವಿಲ್ಲ. ರಾಂಪುರದಲ್ಲಿ ಎಸ್‌ಪಿಯ ಕ್ಷೇತ್ರವನ್ನು ಬಿಜೆಪಿಯ ಆಕಾಶ್ ಸಕ್ಸೇನಾ ಗೆದ್ದಿದ್ದಾರೆ.  ರಾಂಪುರ ಮುಸ್ಲಿಂ ಮತದಾರರು ಅಧಿಕವಿರುವ ಕ್ಷೇತ್ರ ಅಜಂ ಖಾನ್ ಪ್ರತಿನಿಧಿಸಿದ್ದ ಕ್ಷೇತ್ರವಿದು.