68 ಸ್ಥಾನ ಬಲದ ಹಿಮಾಚಲ ಪ್ರದೇಶದ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು 38 ಕ್ಷೇತ್ರಗಳಲ್ಲಿ ಖಚಿತ ಗೆಲುವಿನ ಮುನ್ನಡೆ ಸಾಧಿಸಿದ್ದು ಅದನ್ನು 40 ಆಗಿಸಿಕೊಂಡು ಸುಗಮ ವಿಜಯ ಸಾಧಿಸುತ್ತಿರುವುದಾಗಿ ವರದಿಯಾಗಿದೆ. 

ಬಿಜೆಪಿಯು 25ರಲ್ಲಿ ಸದ್ಯ ಖಚಿತತೆ ಪಡೆದಿದೆ.


ಸಮಾಜವಾದಿ ಪಕ್ಷದ ಸ್ಥಾಪಕ ಮುಲಾಯಂ ಸಿಂಗ್ ಯಾದವ್ ಮರಣದಿಂದ ತೆರವಾದ ಮೈನ್‌ಪುರಿ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಮುಲಾಯಂರ ಸೊಸೆ, ಮಾಜೀ ಮುಖ್ಯಮಂತ್ರಿ ಅಖಿಲೇಶ್ ಸಿಂಗ್ ಯಾದವ್ ಅವರ ಪತ್ನಿ ಡಿಂಪಲ್ ಯಾದವ್ ಗೆಲುವು ಸಾಧಿಸಿದ್ದಾರೆ.

ಮುಲಾಯಂರ ತಮ್ಮ ಶಿವಪಾಲ್ ಸಿಂಗ್ ಯಾದವ್ ರ ಹಿಂಬಾಲಕ ರಘುರಾಜ್ ಸಿಂಗ್ ಸಾಕ್ಯರನ್ನು ನಿಲ್ಲಿಸಿ ಬಿಜೆಪಿ ನಡೆಸಿದ ರಾಜಕೀಯ ಫಲ ನೀಡಿಲ್ಲ. 

ಉದ್ದಕ್ಕೂ ಡಿಂಪಲ್ 60% ಮೀರಿ ಮತ ಗಳಿಸುತ್ತ ಗೆಲುವು ಮುಟ್ಟಿದ್ದಾರೆ.

ಐದು‌ ರಾಜ್ಯಗಳ ಆರು ವಿಧಾನ ಸಭಾ ಕ್ಷೇತ್ರಗಳಿಗೆ ಸಹ ಉಪ ಚುನಾವಣೆ ನಡೆದಿದ್ದು ಮತ ಎಣಿಕೆ ನಡೆಯುತ್ತಿದೆ.