ಚೈಲ್ಡ್‍ಲೈನ್ 1098 ಸೇವೆಯು 25 ವರ್ಷ ಪೂರೈಸಿದ್ದು ರಜತಮಹೋತ್ಸವದ ಸಂಭ್ರಮದಲಿದ್ದು ಪ್ರತಿವರ್ಷದಂತೆ ಈ ವರ್ಷಕೂಡ ನವೆಂಬರ್ 14ರಿಂದ 20ರ ವರೆಗೆ “ಚೈಲ್ಡ್‍ಲೈನ್ ಸೇ ದೋಸ್ತಿ ಸಪ್ತಾಹ” ಕಾರ್ಯಕ್ರಮವನ್ನು ಆಚರಿಸುತ್ತಿದ್ದು ಇದರ ಸಲುವಾಗಿ ದಿನಾಂಕ 14-11-2021 ರಂದು ಮಾದಕದ್ರವ್ಯ ವ್ಯಸನ, ಬಾಲಕಾರ್ಮಿಕತೆ ಮತ್ತು ಮಕ್ಕಳ ಭಿಕ್ಷಾಟನೆ ಹಾಗೂ ಮಕ್ಕಳ ಸುರಕ್ಷತೆಯ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಜಾಥವನ್ನು ಹಮ್ಮಿಕೊಳ್ಳಲಾಗಿತ್ತು. ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು, ಸೈಂಟ್ ಮೇರಿಸ್ ಶಿರ್ವ, ಉಪೇಂದ್ರ ಪೈ ಮೆಮೋರಿಯಲ್ ಕಾಲೇಜು, ಮಿಲಾಗ್ರಿಸ್ ಕಾಲೇಜು, ಮಹತ್ಮಾ ಗಾಂಧಿ ಮೆಮೋರಿಯಲ್ ಕಾಲೇಜು ಕುಂಜಿಬೆಟ್ಟು, ಇಲ್ಲಿನ ಎನ್,ಎಸ್. ಎಸ್. ವಿದ್ಯಾರ್ಥಿಗಳು ಈ ಜಾಥದಲ್ಲಿ ಭಾಗವಹಿಸಿದ್ದರು. ಜಾಥವನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಶರ್ಮಿಳಾ ಎಸ್., ಕಾರ್ಮಿಕ ಇಲಾಖೆಯ ಶ್ರೀ ಕುಮಾರ್ ಬಿ.ಆರ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಶ್ರೀ ಕುಮಾರ್ ನಾಯ್ಕ್, ಬಾಲ ನ್ಯಾಯ ಮಂಡಳಿಯ ಅಮೃತ ಕಲಾ, ಪೊಲೀಸ್ ಇನ್ಸ್‍ಪೆಕ್ಟರ್ ಪ್ರಮೋದ್ ಕುಮಾರ್ ಹಾಗೂ ಚೈಲ್ಡ್‍ಲೈನ್-1098 ಉಡುಪಿಯ ರಾಮಚಂದ್ರ ಉಪಾಧ್ಯಾಯ ಇವರಿಂದ ಉದ್ಘಾಟನೆಗೊಂಡು ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿ ಅಂತಿಮವಾಗಿ ವಿದ್ಯೋದಯ ಪಬ್ಲಿಕ್ ಸ್ಕೂಲ್, ಬೈಲಕೆರೆ, ವಾದಿರಾಜ ರಸ್ತೆ, ಉಡುಪಿಯಲ್ಲಿ  ಮುಕ್ತಾಯವಾಯಿತು. ಜಾಥದಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಚೈಲ್ಡ್‍ಲೈನ್-1098 ಉಡುಪಿಯ ವತಿಯಿಂದ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಈ ಕಾರ್ಯಕ್ರಮಕ್ಕೆ ಧ್ವನಿವರ್ದಕ ಹಾಗೂ ವಾಹನದ ವ್ಯವಸ್ಥೆಯನ್ನು ನಾಗರಾಜ ಉಪಾಧ್ಯಾಯ ಇವರು ಉಚಿತವಾಗಿ ನೀಡಿದರು. ಈ ಕಾರ್ಯಕ್ರಮದಲ್ಲಿ  ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಪೊಲೀಸ್ ಇಲಾಖೆ, ವಿವಿಧ ಕಾಲೇಜುಗಳ ಶಿಕ್ಷಕರು, ಮಕ್ಕಳ ಸಹಾಯವಾಣಿ ಉಡುಪಿ ತಂಡದ ನಿರ್ದೇಶಕರು, ಸಹನಿರ್ದೇಶಕರು ಹಾಗೂ ತಂಡದ ಸದಸ್ಯರು ಭಾಗವಹಿಸಿದ್ದರು.