ಗಜೇಂದ್ರಗಡದವರಾದರೂ ಮಂಗಳೂರಿನಲ್ಲಿ ಹುಟ್ಟಿ ಬೆಳೆದು, ಓದಿ, ಮಂಗಳೂರು ವಿವಿಯಲ್ಲಿ ದುಡಿದು, ವಿಜಯಪುರದ ಮಹಿಳಾ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ ನಿವೃತ್ತರಾದ ಸಬಿಹಾ ಭೂಮಿಗೌಡರಿಗೆ ಅಭಿನಂದನಾ ಗ್ರಂಥ ಸಮರ್ಪಣೆ ಮಂಗಳೂರಿನಲ್ಲಿ ನಡೆಯಿತು.
ಮುಖ್ಯ ಭಾಷಣಕಾರರಾಗಿ ದಿನೇಶ್ ಅಮೀನ್ ಮಟ್ಟು ಅವರು ಹಿಂದಿನಂತೆ ಇಂದು ವಿವಿಗಳಿಂದ ಹೋರಾಟ ಹರಿದು ಬರುತ್ತಿಲ್ಲ. ಸಬಿಹಾ ಅವರ ಮಾತ್ರ ಮದುವೆಯಿಂದ ಮುದಿ ಹರೆಯದ ವರೆಗೂ ತನ್ನ ಕ್ರಾಂತಿ ಹೆಜ್ಜೆಗಳನ್ನು ಹಿಂತೆಗೆದಿಲ್ಲ ಎಂದರು.
ಸಬಿಹಾ ಅವರು ಮಂಗಳೂರಿನಲ್ಲಿನ ತನ್ನ ಬಾಲ್ಯದ ಅನುಭವಗಳನ್ನು ನೆನಪಿಸಿಕೊಂಡರು.
ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘ, ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆ, ಕವಿ ಪ್ರಕಾಶನ ಕವಲಕ್ಕಿ ಕಾರ್ಯಕ್ರಮ ಆಯೋಜಿಸಿದ್ದವು.
ಜ್ಯೋತಿ ಚೇಳ್ಯಾರ್, ಡಾ. ಅನುಪಮ, ಸುಮನಾ, ಗುಲಾಬಿ ಮೊದಲಾದವರು ಇದ್ದರು.