ಇಂಡೋನೇಶಿಯಾದ ಮೂಡಣ ಜಾವಾದ ಮೌಂಟ್ ಸಿಮೆರು ಜ್ವಾಲಾಮುಖಿ ಸ್ಫೋಟ ಶನಿವಾರ ಸಂಜೆ ನಡೆದಿದ್ದು, ರಕ್ಷಣಾ ಕಾರ್ಯದಲ್ಲಿ 14 ಹೆಣಗಳು ಪತ್ತೆಯಾಗಿವೆ.

ಮುಖ್ಯವಾಗಿ 300 ಕುಟುಂಬಗಳು ವಾಸವಿದ್ದ ಕರೋಬೋಕನ್ ಗ್ರಾಮವನ್ನು ಲಾವಾ ನಾಶ ಮಾಡಿದೆ. 42 ಜನರು ಸುಟ್ಟ ಗಾಯಕ್ಕೀಡಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಪತ್ತೆಯಾಗಿರುವವರ ಬಗೆಗೆ ದೂರುಗಳು ಬರುತ್ತಿದ್ದು, ನಿಶ್ಚಿತ ಸಂಖ್ಯೆ ಗೊತ್ತಾಗಿಲ್ಲ.