ಸಂವಿಧಾನ ಬಾಹಿರ ಕಾನೂನಿನಡಿ ಪ್ರಕರಣ ದಾಖಲಿಸಿರುವ ಬಗೆಗೆ ಎರಡು ‌ವಾರದೊಳಗೆ ಉತ್ತರಿಸುವಂತೆ ಕೇಂದ್ರ ಸರಕಾರಕ್ಕೆ ನೋಟೀಸು ನೀಡಿದ ಸುಪ್ರೀಂ ಕೋರ್ಟ್ ತಪ್ಪಿತಸ್ಥ ಅಧಿಕಾರಿಗಳನ್ನು ಜೈಲಿಗೆ ಕಳುಹಿಸಬೇಕಾದೀತು ಎಂದು ಎಚ್ಚರಿಕೆ ನೀಡಿತು.

ಮಾಹಿತಿ ತಂತ್ರಜ್ಞಾನ ಕಾಯ್ದೆಯ 66ಎ ಸೆಕ್ಷನನನ್ನು ಸಂವಿಧಾನ ಬಾಹಿರ ಸುಪ್ರೀಂ ಕೋರ್ಟು 2015ರಡಿ ಕಿತ್ತು ಹಾಕಿತ್ತು. ಆದರೂ ಅಂತರಜಾಲದಲ್ಲಿ ಮಾಹಿತಿ ಹಂಚಿಕೊಳ್ಳುವವರ ವಿರುದ್ಧ ಆಕ್ಷೇಪಾರ್ಹ ಎಂದು ಮೊಕದ್ದಮೆ ದಾಖಲಾಗಿರುವುದರ ವಿರುದ್ಧ ಪಿಯುಸಿಲ್ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಸಿದೆ. ಅವರ ವಕೀಲ ಸಂಜಯ ಪಾರೀಖ್ ಆ ಸೆಕ್ಷನ್ ರದ್ದಾದ ಬಳಿಕ 1,307 ಮೊಕದ್ದಮೆಗಳು‌ ಅದರಡಿ ದಾಖಲಾಗಿವೆ. ಈಗಲೂ ಜಿಲ್ಲಾ ನ್ಯಾಯಾಲಯಗಳಲ್ಲಿ ಇತ್ಯರ್ಥ ಆಗಬೇಕಾದವು 745 ಇವೆ ಎಂದು ತಿಳಿಸಿದರು.

ನ್ಯಾಯದರಿವು ಪೋಲೀಸರಿಗೆ ಇಲ್ಲದಿದ್ದರೆ ಹೇಗೆ ಎಂದು ನ್ಯಾಯಾಧೀಶ ಆರ್. ಎಫ್. ‌ನಾರಿಮನ್ ಕೇಳಿದರು. ನ್ಯಾಯ ಪೀಠದ ಜಸ್ಟಿಸ್‌ಗಳಾದ ಕೆ. ಎಂ. ಜೋಸೆಫ್, ಬಿ. ಆರ್. ಗವಾಯಿ ಮೊಕದ್ದಮೆಯನ್ನು ಎರಡು ವಾರ ಮುಂದೂಡಿದರು.