ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಮಗ ಚಿದಾನಂದ ಪ್ರಯಾಣಿಸುತ್ತಿದ್ದ ಕಾರು ಡಿಕ್ಕಿ ಹೊಡೆದುದರಿಂದ ರೈತರೊಬ್ಬರು ಸಾವಿಗೀಡಾದ ಘಟನೆ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನಡೆದಿದೆ.
ಉಪ ಮುಖ್ಯಮಂತ್ರಿ ಸುತನ ಕಾರು ಬೆಂಗಳೂರಿನಿಂದ ಅಥಣಿಗೆ ಹೊರಟಿತ್ತು. ಬಾಗಲಕೋಟೆ ತಾಲೂಕಿನ ಚಿಕ್ಕ ಹಂಡರಗಲ್ ಗ್ರಾಮದ ಕೂಡ್ಲೆಪ್ಪ ಹನುಮಪ್ಪ ಬೋಳಿ ಮೃತರು. ಅವರು ಹೊಲದಿಂದ ಇಗ್ಗಾಲಿ ವಾಹನದಲ್ಲಿ ಮನೆಗೆ ವಾಪಾಸಾಗುತ್ತಿದ್ದರು.
ಸವದಿಯವರ ಮಗ ಚಿದಾನಂದ ಬೇರೊಂದು ವಾಹನದಲ್ಲಿ ಹೋಗಲು ಪ್ರಯತ್ನ ಮಾಡಿದರೆ ರೈತರು ಬಿಡಲಿಲ್ಲ. ಹನುಮಪ್ಪರನ್ನು ಗುಳೇದಗುಡ್ಡ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಕಾಲ ಮೀರಿತ್ತು.