ಸೋಮವಾರ ದಿನದ 24 ಗಂಟೆಗಳಲ್ಲಿ ಭಾರತದಲ್ಲಿ ನೋವೆಲ್ ಕೋವಿಡ್ 19 ಹತೋಟಿಗೆ ಬಂದ ಲಕ್ಷಣ ಇದೆ ಎನ್ನಬಹುದು.
ನಿನ್ನೆ ದಿನ ನಮ್ಮ ಜನ ಭಾರತ ದೇಶದಲ್ಲಿ 34,703 ಮಂದಿ ಪಾಸಿಟಿವ್ ಸಾಂಕ್ರಾಮಿಕರಾದರು. ಸೋಂಕಿತರ ಮೊತ್ತವು ಅಲ್ಲಿಗೆ 3,06,19,932ಕ್ಕೆ ಏರಿದೆ.
ನಿನ್ನೆ ದಿನ ನಮ್ಮ ಜನ 553 ಮಂದಿ ಕೊರೋನಾ ಸಾವು ಹೊಂದಿದರು. ದೇಶದಲ್ಲಿ ಈಗ ಕೋವಿಡ್‌ಗೆ ಬಲಿಯಾದವರ ಸಂಖ್ಯೆಯು 4,03,281 ಮುಟ್ಟಿತು.
ಕರ್ನಾಟಕದಲ್ಲಿ ಕೋವಿಡ್ ಕವಾಯತು
ಕರ್ನಾಟಕದ ಕೋವಿಡ್ ವ್ಯಾಪಕತೆಯು ನಿಜಕ್ಕೂ ಕಡಿಮೆಯಾಗಿದೆ. ಬೆಂಗಳೂರು ನಗರ ಮೀರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿನ್ನೆ ಹೆಚ್ಚು 12 ಸಾವು ಆಗಿದೆ. ಸೋಮವಾರ ದಿನ ರಾಜ್ಯದಲ್ಲಿ ಹೊಸದಾಗಿ ಸೋಂಕಿತರಾದವರ ಸಂಖ್ಯೆಯು 2,848 ಹಾಗೂ ಅದೇ 24 ಗಂಟೆಗಳಲ್ಲಿ ಕೋವಿಡ್‌ನಿಂದ ಮೃತರಾದವರ ಸಂಖ್ಯೆಯು 67 ಎನ್ನಲಾಗಿದೆ. ರಾಜ್ಯದಲ್ಲಿನ ಸೋಂಕು ಮೊತ್ತವು ಈಗ ಒಟ್ಟು 28,57,179ಕ್ಕೆ ತಲುಪಿದೆ. ಒಟ್ಟು ಮರಣ ಹೊಂದಿದವರ ಸಂಖ್ಯೆ 35,434 ದಾಟಿದೆ.