ಬೆಂಗಳೂರಿನಾಚೆ ಕೈಗಾರಿಕಾ ಕ್ಷೇತ್ರ ಹೆಚ್ಚಿಸಲು ಸರಕಾರ ಪಣ ತೊಟ್ಟಿದೆ. ಕರಾವಳಿಯಲ್ಲಿ ಕೈಗಾರಿಕೆ ಸ್ಥಾಪನೆಗಾಗಿ ಮೂಳೂರಿನಲ್ಲಿ 250 ಎಕರೆ ಹಾಗೂ ಬಳ್ಕುಂಜೆಯಲ್ಲಿ 800 ಎಕರೆ ಭೂಮಿ ಸ್ವಾದೀನ ಆಗುತ್ತಿದೆ ಎಂದು ಕೈಗಾರಿಕಾ ಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.
Jagadish Shettar
ಬೆಳಪು ಮತ್ತು ನಂದಿಕೂರು ಕೈಗಾರಿಕಾ ಪ್ರದೇಶಗಳಿಗೆ ಭೇಟಿ ನೀಡಿದ ಅವರು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಇನ್ನಷ್ಟು ಕೈಗಾರಿಕಾ ವಲಯಗಳಿಗೆ ಬೇಡಿಕೆಯಿದೆ. ಉಲ್ಲಾಸ್ ಕಾಮತ್ ಟಾಸ್ಕ್ ಫೋರ್ಸ್ ವರದಿ ತರಿಸಿಕೊಂಡು ಕರಾವಳಿಯ ಕೈಗಾರಿಕಾ ಭೂಪಟ ವಿಸ್ತರಿಸಲಾಗುವುದು ಎಂದೂ ಸಚಿವರು ಹೇಳಿದರು.