ಮಂಗಳವಾರ ಮಧ್ಯಾಹ್ನ ನಿಗದಿ ಪಡಿಸಿದ್ದ ಮಂತ್ರಿಗಳ ನಡುವಣ ಸಮಾಲೋಚನಾ ಸಭೆಯನ್ನು ಪ್ರಧಾನಿ ಮೋದಿಯವರು ಒಮ್ಮೆಗೇ ರದ್ದು ಪಡಿಸಿದರು. ಆ ಕಾರಣದಿಂದ ಬುಧವಾರ ಕೇಂದ್ರ ಸಂಪುಟ ಅಲುಗಾಟ ಎಂಬ ಗುಲ್ಲು ಟುಸ್ ಆಯಿತು.

ಒಂದು ವಾರದಿಂದ ಕೆಲವರನ್ನು ಹೊರಕ್ಕೆ, ಕೆಲವರನ್ನು ಒಳಕ್ಕೆ ಬಿಟ್ಟುಕೊಳ್ಳಲು ಮೋದಿಯವರು ಹಿರಿಯ ಸಚಿವರ ಸಭೆ ಕರೆದಿದ್ದಾರೆ ಎಂದು ಗುಲ್ಲು ಇತ್ತು. ಇದರ ನಡುವೆ ಕೆಲವರು ಸಂಪುಟ ಸೇರಲು ಹೊಸ ಕೋಟು ಎಲ್ಲ ಹೊಲಿಸಿದ್ದರು. ಸದ್ಯಕ್ಕಂತೂ ಅದು ನಡೆಯದು.