ಬಂಟ್ವಾಳ: ಲೊರೆಟ್ಟೊ ಆಂಗ್ಲ ಮಾಧ್ಯಮ ಶಾಲೆ ಸಿ.ಬಿ.ಎಸ್.ಇವನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಫಾ. ಜೇಸನ್ ವಿಜಯ್ ಮೊನಿಸ್, ಮುಖ್ಯ ಅತಿಥಿ ಪ್ರತಿಮಾ ವೈ.ವಿ. (ECO ಬಂಟ್ವಾಳ), ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ರೊಡ್ನಿ ಐವಾನ್ ಡಿಸೋಜಾ ಮತ್ತು ಉಪಪ್ರಾಂಶುಪಾಲೆ ಅನಿತಾ ಪೈಸ್ ಅವರು ಉಪಸ್ಥಿತರಿದ್ದರು. 

ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು ಹಾಗೂ ನೆಹರೂ ಭಾವಚಿತ್ರಕ್ಕೆ ಪುಷ್ಪಾಂಜಲಿ ಅರ್ಪಿಸಲಾಯಿತು. ಮುಖ್ಯ ಅತಿಥಿ ಅವರು ಮಕ್ಕಳ ದಿನದ ಮಹತ್ವ, ಮಕ್ಕಳ ಹಕ್ಕುಗಳು—ಶಿಕ್ಷಣದ ಹಕ್ಕು, ರಕ್ಷಣೆಯ ಹಕ್ಕು ಹಾಗೂ ಅಭಿವ್ಯಕ್ತಿಯ ಹಕ್ಕು—ಇವುಗಳ ಕುರಿತು ಮಾತನಾಡಿದರು. ಪ್ರಾಂಶುಪಾಲರಾದ ಫಾ. . ಜೇಸನ್ ವಿಜಯ್ ಮೊನಿಸ್  ಅವರು ಮಕ್ಕಳನ್ನು ಗಿಡಗಳಿಗೆ ಹೋಲಿಸಿ, ಪೋಷಕರು ಮತ್ತು ಶಿಕ್ಷಕರು ನೀಡುವ ಮಾರ್ಗದರ್ಶನ ಮತ್ತು ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡು ಜೀವನದಲ್ಲಿ ಪ್ರಜ್ವಲಿಸಬೇಕೆಂದು ಒತ್ತಿ ಹೇಳಿದರು.. ಶಿಕ್ಷಕರು ಮತ್ತು ಪೋಷಕರು ನೀಡಿದ ಸಾಂಸ್ಕೃತಿಕ ಕಾರ್ಯಕ್ರಮವು ಎಲ್ಲರ ಮನ ಸೆಳೆಯಿತು.