ಓಲಾ ಎಲೆಕ್ಟ್ರಿಕ್ ತಮಿಳುನಾಡಿನಲ್ಲಿ ಓಲಾ ಎಲೆಕ್ಟ್ರಿಕ್ ಸ್ಕೂಟರ್ ತಯಾರಿಸಲು 2,400 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದು, ಮೊದಲನೆಯದು ಪ್ರಾಯೋಗಿಕ ಹಂತ ತಲುಪಿದೆ.

ಒಂದು ಲಕ್ಷ ಬೆಲೆಬಾಳುವ ಓಲಾ   ಎಲೆಕ್ಟ್ರಿಕ್ ಸ್ಕೂಟರ್ ಗಂಟೆಗೆ 60 ಕಿಮೀ ವೇಗ ನೀಡಲಿದ್ದು, ಒಮ್ಮೆ ಚಾರ್ಜ್ ಮಾಡಿದರೆ‌ 150 ಕಿಮೀ ಓಡುತ್ತದೆ. ಮನೆಯಲ್ಲಿಯೇ ಚಾರ್ಜ್ ಮಾಡಲು ಅವಕಾಶವಿದೆ.

ಅಲ್ಲದೆ ಓಲಾ 100 ನಗರಗಳಲ್ಲಿ 5,000 ಚಾರ್ಜಿಂಗ್ ಪಾಯಿಂಟುಗಳನ್ನು ತೆರೆಯಲಿದೆ. 18 ನಿಮಿಷದಲ್ಲಿ ಅರ್ಧ ಬ್ಯಾಟರಿ ಚಾರ್ಜ್ ಮಾಡಿಸಿಕೊಂಡು 75 ಕಿಮೀ ಹೋಗಿ ಬರಬಹುದು. ಇನ್ನಾರು ತಿಂಗಳಲ್ಲಿ ಮಂಗಳೂರು ರಸ್ತೆಯಲ್ಲಿ ಓಲಾ ಇರುತ್ತದೆ. ಬೆಂಗಳೂರಿನ ಏಥರ್ ಎನರ್ಜಿಯ 450ಎಕ್ಸ್ ಈಗಾಗಲೇ ಮಾರ್ಗದಲ್ಲಿದೆ. ಅದಕ್ಕೆ ಓಲಾ ಪೈಪೋಟಿ ನೀಡಲಿದೆ.