ಚೀನಾದ ಗಗನಯಾತ್ರಿಗಳಾದ ಲಿಯು ಬೊಮಿಂಗ್ ಮತ್ತು ತಾಂಗ್ ಹಾಂಗ್ಬೊ ಅವರುಗಳು ನಿನ್ನೆ ಆಕಾಶದಲ್ಲಿ ನಡೆದಾಡುತ್ತ 15 ಮೀಟರ್ ಉದ್ದದ ರೋಬೋಟಿಕ್ ರೆಕ್ಕೆ ಸರಿಪಡಿಸಿದರು.

ಇನ್ನೊಬ್ಬ ಸಹ ಯಾನಿ ನೇ ಹಯ್ಶಿಂಗ್ ಒಳ ವ್ಯವಸ್ಥೆ ನೋಡಿಕೊಂಡರು. ಈ ಮೂವರು ಗಗನಯಾತ್ರಿಗಳು ಜೂನ್ 17ರಂದು ಇಲ್ಲಿಗೆ ಬಂದಿದ್ದು, ಟಿಯಾನೆ ಬಾಹ್ಯಾಕಾಶ ನಿಲ್ದಾಣವನ್ನು ಸಜ್ಜುಗೊಳಿಸುತ್ತಿದ್ದಾರೆ. ಈ ವರುಷಾಂತ್ಯದೊಳಗೆ 11 ಅಂತರಿಕ್ಷ ಯಾನಕ್ಕೆ ಚೀನಾ ಯೋಜನೆ ಹಾಕಿಕೊಂಡಿದೆ.