ಭಾನುವಾರ ಫಿಲಿಪ್ಪೀನ್ಸ್‌ನ ಸುಲು ಪ್ರಾಂತ್ಯದ ಜುಲು‌ ವಿಮಾನ ನಿಲ್ದಾಣದಲ್ಲಿ ರನ್‌ವೇನಲ್ಲಿ ಇಳಿಯಲಾಗದೆ ಅಪಘಾತ ಹೊಂದಿದ ಸೇನಾ ವಿಮಾನ ‌ದುರಂತದಲ್ಲಿ ಸತ್ತವರ ಸಂಖ್ಯೆ 50ಕ್ಕೇರಿದೆ.

ವಿಮಾನವು ನಿಲ್ದಾಣದಲ್ಲಿದ್ದ 7 ಜನರಿಗೂ ಡಿಕ್ಕಿ ಹೊಡೆದಿದೆ. ಅವರಲ್ಲೂ ಮೂವರು ಮರಣ ಹೊಂದಿದರು. ಸೇನಾ ವಿಮಾನದಲ್ಲಿ 96 ಯೋಧರಿದ್ದರು. ಅವರಲ್ಲಿ 49 ಮಂದಿಯನ್ನು ರಕ್ಷಿಸಲಾಗಿದೆ. ಅಮೆರಿಕ ಹೋದ ವರುಷವಷ್ಟೆ ನೀಡಿದ ಲಾಕ್‌ವೀದ್ ಸಿ-130 ಹೆರ್ಕ್ಯುಲಿಸ್ ವಿಮಾನದ ಅಪಘಾತ ಕಾರಣಕ್ಕಾಗಿ ಶೋಧ ನಡೆದಿದೆ.