ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಗಣಕವಿಜ್ಞಾನ ವಿಭಾಗ ಮತ್ತು ಪಿನ್ಯಾಕಲ್ ಐಟಿ ಕ್ಲಬ್‌ಗಳ ಸಂಯುಕ್ತ ಆಶ್ರಯದಲ್ಲಿ ಮಟ್ಟದ ಐಟಿ ಫೆಸ್ಟ್ ಪಿನ್ಯಾಕಲ್-25 ರ ಸಮಾರೋಪ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಫೆಸ್ಟನಲ್ಲಿ ಪ್ರೊಡಕ್ಟ್ ಲಾಂಚ್, ಐಟಿ ಕ್ವಿಜ್, ಐಟಿ ಮ್ಯಾನೇಜರ್, ಕೋಡಿಂಗ್, ವೆಬ್ ಡಿಜೈನ್, ಫೋಟೋಗ್ರಫಿ, ಪೇಪರ್ ಪ್ರೆಸೆಂಟೇಶನ್, ಸರ್ಪ್ರೈಜ್ ಇವೆಂಟ್, ಗೇಮಿಂಗ್, ಹಾಗೂ ಗ್ರೂಪ್ ಡಾನ್ಸ್ ಮುಂತಾದ 10 ಸ್ಪರ್ಧೆಗಳನ್ನು ಆಯೋಜಿಸಲಾಯಿತು. ಒಟ್ಟು 19 ತಂಡಗಳು ಭಾಗವಹಿಸಿದ್ದವು. ಬಹುತೇಕ ಸ್ಪರ್ಧೆಗಳಿಗೆ ಕಾಲೇಜಿನ ಹಿರಿಯ ವಿದ್ಯಾರ್ಥಿಗಳೇ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದ್ದರು. ಮಾತ್ರವಲ್ಲದೆ ವಿಭಾಗದ ಬಹಳಷ್ಟು ಹಿರಿಯ ವಿದ್ಯಾರ್ಥಿಗಳು ಪ್ರಾರಂಭದಿಂದ ಕೊನೆಯವರೆಯೂ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.
ಸಮಾರಂಭದಲ್ಲಿ ಕಾಲೇಜಿನ ಉಪಪ್ರಾಂಶುಪಾಲರಾದ ಡಾ| ವಿಜಯಕುಮಾರ್ ಎಂ ಅಧ್ಯಕ್ಷರಾಗಿ ಹಾಗೂ ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಪ್ರಸ್ತುತ ಮಂಗಳೂರಿನ ಯುನಿಫೈಸಿಎಕ್ಸ್ (ಗ್ಲೋಟಚ್ ಟೆಕ್ನಾಲಜೀಸ್)ನಲ್ಲಿ ಲರ್ನಿಂಗ್ ಡ್ ಡೆವಲಪ್ಮೆಂಟ್ ಸ್ಪೆಶಲಿಸ್ಟ್ ಆಸಿರುವ ಸೈಲೀ ವಿಠ್ಠಲ್ ಸುವರ್ಣ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಡಾ| ವಿಜಯಕುಮಾರ್ರವರು ಡಿಜಿಟಲ್ ಯುಗದಲ್ಲಿ ಮಾನವೀಯ ಸಂಬಂಧಗಳ ಪ್ರಾಮುಖ್ಯತೆಯನ್ನು ತಿಳಿಸಿದರು.
ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಆಯೋಜಕರು, ಮಾರ್ಗದರ್ಶನ ನೀಡಿದ ಅಧ್ಯಾಪಕರು, ಹಾಗೂ ಹಿರಿಯ ವಿದ್ಯಾರ್ಥಿಗಳನ್ನು ಶ್ಲಾಘಿಸಿದರು. ಭಾಗವಹಿಸಿದ ತಂಡಗಳಿಗೆ ಅಭಿನಂದನೆ ಸಲ್ಲಿಸಿದರು. ಅತಿಥಿಯಾಗಿ ಭಾಗವಹಿಸಿದ ಸೈಲೀಯವರು ತಮ್ಮ ಜೀವನದಲ್ಲಿ ಸ್ಪರ್ಧೆಗಳಲ್ಲಿ ಭಾಗವಹಿಸಿದಾಗ ಸ್ಪರ್ಧೆಗಳನ್ನು ಆಯೋಜಿಸಿದಾಗ ತಮಗೆ ದೊರೆತ ಆತ್ಮವಿಶ್ವಾಸದ ಕುರಿತು ಹೇಳಿದ ಅವರು “ಈ ಕಾರ್ಯಕ್ರಮವು ಕೇವಲ ಕೌಶಲ್ಯಗಳನ್ನು ಪ್ರದರ್ಶಿಸುವುದಕ್ಕಲ್ಲ. ಇದು ವಿದ್ಯಾರ್ಥಿಗಳ ಪರಿಶ್ರಮ, ಸೃಜನಶೀಲತೆ ಹಾಗೂ ಪ್ರತಿಭೆಗೆ ಮತ್ತು ಅಪರಿಮಿತ ಉತ್ಸಾಹಕ್ಕೆ ಸಾಕ್ಷಿಯಾಗಿದೆ. ಪ್ರಮಾಣಪತ್ರಗಳು ಮತ್ತು ಪುರಸ್ಕಾರಗಳನ್ನು ಮೀರಿ ಕಲಿತ ಪಾಠಗಳು, ಮಾಡಿದ ಸ್ನೇಹ ಮತ್ತು ಜಯಿಸಿದ ಸವಾಲುಗಳು ನಿಮ್ಮ ಮುಂದಿನ ಪ್ರಯಾಣವನ್ನು ರೂಪಿಸುತ್ತವೆ. ಕಲಿಯಲು, ಬೆಳೆಯಲು ಮತ್ತು ಇತರರಿಗಿಂತ ವಿಭಿನ್ನವಾಗಿ ಚಿಂತಿಸಲು ಸಿಕ್ಕ ಪ್ರತಿಯೊಂದು ಅವಕಾಶವನ್ನು ಸ್ವೀಕರಿಸಿರಿ. ನೀವು ಇಂದು ಇಲ್ಲಿ ಇರಿಸಿದ ಒಂದೊಂದು ದಿಟ್ಟ ಹೆಜ್ಜೆಯೂ ನಿಮ್ಮ ಉಜ್ವಲ ಭವಿಷ್ಯಕ್ಕೆ ನಾಂದಿಯಾಗುವುದು” ಎಂದರು.
ಫೆಸ್ಟ್ ನ ವಿದ್ಯಾರ್ಥಿ ಸಂಯೋಜಕರಾದ ಅಶ್ವಿನ್ ಸ್ವಾಗತಿಸಿದರು, ವಿದ್ಯಾರ್ಥಿ ಸಂಯೋಜಕಿ ದಿಶಾ ಪರ್ಲ್ ಮಸ್ಕರೇನಸ್ ವಂದಿಸಿದರು. ದ್ವಿತೀಯ ಬಿಸಿಎ ವಿದ್ಯಾರ್ಥಿನಿ ಸಹನಪ್ರಿಯ ಕಾರ್ಯಕ್ರಮ ನಿರೂಪಿಸಿದರು. ಡಾ| ಗೀತಾ ಪೂರ್ಣಿಮಾ ಕೆ ವಿಜೇತರ ಹೆಸರನ್ನು ವಾಚಿಸಿದರು. ಕಾಲೇಜಿನ ಪರೀಕ್ಷಾಂಗ ಕುಲಸಚಿವರೂ ಗಣಕವಿಜ್ಞಾನ ವಿಭಾಗದ ಡೀನ್ ಹಾಗೂ ಮುಖ್ಯಸ್ಥರಾದ ಡಾ| ವಿನಯಚಂದ್ರ ಹಾಗೂ ಪಿನ್ಯಾಕಲ್-25ರ ವಿದ್ಯಾರ್ಥಿ ಸಂಯೋಜಕ ಲೆನಿನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸ್ಪರ್ಥಗಳ ಫಲಿತಾಂಶ: ಕೋಡ್ ಕ್ಲ್ಯಾಶ್ (ಪ್ರ) ರೋಲ್ಡಾನ್ (ಸಂತ ಅಲೋಶಿಯಸ್ ಕಾಲೇಜು ಮಂಗಳೂರು), (ದ್ವಿ) ಶಶಿಧರ್ ಕೆ, (ಸೇಕ್ರೆಡ್ ಹಾರ್ಟ್ ಕಾಲೇಜು ಮಡಂತ್ಯಾರು), ಫೊಟೋಗ್ರಫಿ: (ಪ್ರ)ಲಾಲು ಪ್ರಸಾದ್ (ಎಫ್ ಎಂ ಕೆ ಎಂ ಸಿ, ಮಡಿಕೇರಿ), (ದ್ವಿ) ಪ್ರಜ್ವಲ್ ಗೌಡ (ವಿವೇಕಾನಂದ ಕಾಲೇಜು ಪುತ್ತೂರು), ಗೇಮಿಂಗ್: (ಪ್ರ) ವಿಲಾಸ್ ಜಿ ವಿ, ನಿಖಿಲ್ ವರಿಷ್ಠ (ಎಂ ಜಿ ಎಂ ಕಾಲೇಜು, ಉಡುಪಿ), (ದ್ವಿ) ನಿಖಿತ್ ಪಿ ಬಿ, ಪ್ರತಾಪ್ ಎಂ (ಎಫ್ ಎಂ ಕೆ ಎಂ ಸಿ, ಮಡಿಕೇರಿ), ಐಟಿ ಕ್ವಿಜ್: (ಪ್ರ) ಪ್ರಕೃತಿ ಶೆಟ್ಟಿ, ವಿನಿತ್ ಕುಮಾರ್ (ಎಸ್ ಡಿ ಎಂ ಕಾಲೇಜು ಮಂಗಳೂರು), (ದ್ವಿ) ಸಂಜನಾ ಎಸ್ ಕೆ, ನೀಲ್ ರಸ್ಕಿನ್ಹಾ (ಸರಕಾರಿ ಪ್ರಥಮ ದರ್ಜೆ ಕಾಲೇಜು ರಥಬೀದಿ ಮಂಗಳೂರು) ವೆಬ್ ಡಿಸೈನ್: (ಪ್ರ) ಸಂದೀಪ್ ಶೆಟ್ಟಿ (ಎಂ ಜಿ ಎಂ ಕಾಲೇಜು, ಉಡುಪಿ), (ದ್ವಿ) ಸಿಯೋನ್ (ಸಂತ ಅಲೋಶಿಯಸ್ ಕಾಲೇಜು ಮಂಗಳೂರು), ಪ್ರೊಡಕ್ಟ್ ಲಾಂಚ್: (ಪ್ರ) ಸೃಜನ್, ನ್ಯಾಶ್ (ಸಂತ ಅಲೋಶಿಯಸ್ ಕಾಲೇಜು ಮಂಗಳೂರು), (ದ್ವಿ) ಹೃತಿಕಾ, ದರ್ಶಿಲ್ ಶೆಟ್ಟಿ (ಸೇಕ್ರೆಡ್ ಹಾರ್ಟ್ ಕಾಲೇಜು ಮಡಂತ್ಯಾರು), ಪೇಪರ್ ಪ್ರೆಸೆಂಟೇಶನ್: (ಪ್ರ) ಮನಸ್ವಿ ಡಿ ಶೆಟ್ಟಿ (ಕೆನರಾ ಕಾಲೇಜು ಮಂಗಳೂರು), (ದ್ವಿ) ಡೈಲನ್ ಶರ್ಲಿನ್ ಡಿಸೋಜ (ಸಂತ ಅಲೋಶಿಯಸ್ ಕಾಲೇಜು ಮಂಗಳೂರು), ಐಟಿ ಮ್ಯಾನೇಜರ್: (ಪ್ರ) ಮೆಲನಿ ಸೋನಲ್ ಲೋಬೊ (ಸೇಕ್ರೆಡ್ ಹಾರ್ಟ್ ಕಾಲೇಜು ಮಡಂತ್ಯಾರು), (ದ್ವಿ) ಹರ್ಷಿತ್ ಶೆಟ್ಟಿ (ವಿವೇಕಾನಂದ ಕಾಲೇಜು ಪುತ್ತೂರು), ಸರ್ಪ್ರೈಜ್ ಇವೆಂಟ್: ಭವಿಷ್ ಕೆ (ವಿವೇಕಾನಂದ ಕಾಲೇಜು ಪುತ್ತೂರು), ಅಪೇಕ್ಷಾ ಕೆ ಜೆ ಶೆಟ್ಟಿ (ಅಕ್ಷಯ ಕಾಲೇಜು ಪುತ್ತೂರು), ಗ್ರೂಪ್ ಡಾನ್ಸ್: (ಪ್ರ) ಶ್ರೀ ಮೇಧಾ ಕಾಲೇಜು ತಂಡ ಬಳ್ಳಾರಿ, (ದ್ವಿತೀಯ) ಎಫ್ ಎಂ ಕೆ ಎಂ ಸಿ, ಮಡಿಕೇರಿ.
ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ ಎಂ ಕಾರಿಯಪ್ಪ ಕಾಲೇಜಿಗೆ ರೂ 5 ಸಾವಿರ ಸಹಿತ ದ್ವಿತೀಯ ರನ್ನರ್ಸ್ ಅಪ್ ಪ್ರಶಸ್ತಿ, ಸೇಕ್ರೆಡ್ ಹಾರ್ಟ್ ಕಾಲೇಜು ಮಡಂತ್ಯಾರು ತಂಡಕ್ಕೆ ರೂ 7 ಸಾವಿರದೊಂದಿಗೆ ಪ್ರಥಮ ರನ್ನರ್ಸ್ ಅಪ್ ಪ್ರಶಸ್ತಿ ದೊರೆತರೆ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜು ತಂಡವು ರೂ 10 ಸಾವಿರದೊಂದಿಗೆ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿತು.