ಕಾಂಗ್ರೆಸ್ ಸರಕಾರವು ರಚಿಸಿದ ರಸ್ತೆ, ರೈಲುಗಳಲ್ಲಿ ಓಡಾಡುತ್ತ, ಕಾಲೇಜುಗಳಲ್ಲಿ ಓದುತ್ತ, ನಮ್ಮ ಕಾಲದ ಪೆಟ್ರೋಲನ್ನು ದುಪ್ಪಟ್ಟು  ಬೆಲೆಗೆ ಮಾರುತ್ತ 70 ವರುಷಗಳಿಂದ ಏನು ಮಾಡಿದಿರಿ ಎಂದು ಕೇಳುವ ಸರಕಾರ ಜನರಿಗೆ ಅನುಕೂಲ ಕಂಡಿತ ಮಾಡುವುದಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಮಂಗಳೂರು ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಹೇಳಿದರು.

ನಾನು ಆಸ್ಕರ್ ಫೆರ್ನಾಂಡೀಸ್ ಅವರನ್ನು ನೋಡಲು ಮಂಗಳೂರಿಗೆ ಬಂದಿದ್ದೇನೆ.

ಕೊಂಕಣ ರೈಲ್ವೆ ಕಾಲದಲ್ಲಿ ನಾನು ಕಂದಾಯ ಸಚಿವ ಆಗಿದ್ದೆ. ಆಗ ಅವರು ಹಳ್ಳಿ ಹಳ್ಳಿ ಸುತ್ತಿ ಕೊಂಕಣ ರೈಲ್ವೆಗೆ ಜಾಗ ಹಿಡಿದರು. ಆಗಿನಿಂದಲೂ ನಾವು ಮಿತ್ರರು.

ಇಲ್ಲಿ ರಮಾನಾಥ ರೈ ಯು. ಟಿ. ಖಾದರ್ ಅವರಂಥವರು ಇರುವುದರಿಂದ, ನಾನು ದೆಹಲಿಗೆ ಹೋದುದರಿಂದ ಇತ್ತ ಬಂದಿಲ್ಲ.

ಕರಾವಳಿ, ಮಂಗಳೂರು ಸ್ವಾತಂತ್ರ್ಯ ಸಿಕ್ಕಾಗ ಹೇಗಿತ್ತು, ಈಗ ಎಷ್ಟು ಅಭಿವೃದ್ಧಿ ಹೊಂದಿದೆ. ಕಾಣುವುದಿಲ್ಲವೆ?

ಸ್ವಾತಂತ್ರ್ಯ ಸಿಕ್ಕಾಗ 5 ಪಬ್ಲಿಕ್ ಸೆಕ್ಟರ್‌ಗಳು ಇದ್ದವು. ಅದನ್ನು 366 ಪಬ್ಲಿಕ್ ಸೆಕ್ಟರ್ ಮಾಡಿದ್ದೇವೆ. ಅದನ್ನು ಮಾರುವವರು 70 ವರುಷ ಏನು ಮಾಡಿದಿರಿ ಎಂದು ಕಾಂಗ್ರೆಸ್‌ಗೆ ಕೇಳುತ್ತಿದ್ದಾರೆ.

26,700 ಕಿಮೀ ರಸ್ತೆ, 400 ರೈಲು ನಿಲ್ದಾಣಗಳು, ಸಾವಿರಾರು ಕಿಮೀ ಹಳಿಗಳು, ಶಾಲಾ ಕಾಲೇಜುಗಳು. ಅದರಲ್ಲಿ  ಓಡಾಡುತ್ತ, ಓದುತ್ತ ಮೋದಿ ಕೇಳುತ್ತಿದ್ದಾರೆ 70. ವರುಷ ಏನು ಮಾಡಿದಿರಿ ಎಂದು?

ಇಂದಿರಾ ಗಾಂಧಿ, ದೇವರಾಜ ಅರಸು ಕಾಲದಲ್ಲಿ ಭೂಸುಧಾರಣೆ ತಂದೆವು. ಇಲ್ಲಿನ 3.5 ಲಕ್ಷ ಗೇಣಿದಾರರು ಭೂಮಾಲಕರಾದರು. ಹೇಗೆ ಮರೆಯುತ್ತೀರಿ?

ಕಾಂಗ್ರೆಸ್ ಇದ್ದಾಗ ರೈಲ್ವೆಯಲ್ಲಿ 16 ಲಕ್ಷ ಜನ ಕೆಲಸ ಮಾಡುತ್ತಿದ್ದರು. ಈಗ 12 ಲಕ್ಷಕ್ಕೆ ಇಳಿದಿದೆ. ಟೆಲಿಕಾಂನಲ್ಲಿ 4 ಲಕ್ಷ ಕೆಲಸಗಾರರು, ಈಗ ಎಲ್ಲಿದ್ದಾರೆ?

ಪಬ್ಲಿಕ್ ಸೆಕ್ಟರ್ ಗಳಿಂದ 1,50,000 ಕೋಟಿ ಲಾಭವಿದೆ. ಕೆಲವದರಲ್ಲಿ 37 ಕೋಟಿ ನಷ್ಟ ಎಂದು ಎಲ್ಲವನ್ನು ಮಾರುವುದು? ಲಾಭದ ಎಲ್‌ಐಸಿ ಮಾರುವುದೇಕೆ?

ಇಬ್ಬರು ಮಾರುತ್ತಾರೆ, ಇಬ್ಬರು ಅವರೆ ತಯಾರಿಸಿದ ಖರೀದಿದಾರು ಕೊಳ್ಳುತ್ತಾರೆ. ಇವರು ರಸ್ತೆ, ವಿಮಾನ ನಿಲ್ದಾಣ ಎಲ್ಲ ಅಡವಿಟ್ಟರೆ ಅವರು ಸರಕಾರಕ್ಕೆ ಬರುವ ನಾಲ್ಕು ಪಟ್ಟು ಸುಂಕ ವಸೂಲು ಮಾಡುತ್ತಾರೆ.

ಬೆಲೆಯೇರಿಕೆ ಹೇಗೆ ಆಗಿದೆ ಎಂದರೆ ಸುಲಿಗೆ. ಮೋದಿ ಸರಕಾರವು ಸುಳ್ಳಿನ ಸಾಮ್ರಾಜ್ಯ ಕಟ್ಟಿದೆ ಹೊರತು ಅಭಿವೃದ್ಧಿಯ ನಿಜ ಆಡಳಿತ ನೀಡಿಲ್ಲ ಎಂದೂ ಮಲ್ಲಿಕಾರ್ಜುನ ಖರ್ಗೆಯವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜೀ ಮಂತ್ರಿಗಳಾದ ರಮಾನಾಥ ರೈ, ಯು.ಟಿ. ಖಾದರ್, ಅಭಯಚಂದ್ರ ಜೈನ್,ಡಿಕೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹರೀಶ್ ಕುಮಾರ್, ಜೆ. ಆರ್. ಲೋಬೋ ಮೊದಲಾದವರು ಉಪಸ್ಥಿತರಿದ್ದರು.