ಮಾಜಿ ಕೇಂದ್ರ ಸಚಿವ, ರಾಜ್ಯಸಭಾ ಸದಸ್ಯರಾದ ಆಸ್ಕರ್ ಫೆರ್ನಾಂಡಿಸ್ ರವರ ಅರೋಗ್ಯ ಸುಧಾರಣೆ ಮತ್ತು ಶೀಘ್ರ ಗುಣಮುಖರಾಗಲೆಂದು ಕುದ್ರೋಳಿ ಗೋಕರ್ಣನಾಥ ದೇವಸ್ಥಾನದಲ್ಲಿ ಇಂದು ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ವಿಶೇಷ ಪೂಜೆ ನಡೆಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್, ಮಾಜಿ ಸಚಿವ ಬಿ. ರಮಾನಾಥ ರೈ, ಅಭಯ ಚಂದ್ರ, ಮಾಜಿ ಶಾಸಕರಾದ ಜೆ. ಆರ್. ಲೋಬೊ, ಐವನ್ ಡಿಸೋಜಾ, ಎಐಸಿಸಿ ಕಾರ್ಯದರ್ಶಿ ಪಿವಿ ಮೋಹನ್, ಪಕ್ಷದ ನಾಯಕರಾದ ಮಿಥುನ್ ರೈ, ಶಾಲೆಟ್ ಪಿಂಟೋ, ಶಶಿಧರ್ಡಾ ಹೆಗ್ಡೆ,. ಬಿ. ಜಿ. ಸುವರ್ಣ, ರಾಜಶೇಖರ್ ಕೋಟ್ಯಾನ್, ಮೊಹಮ್ಮದ್ ಮೋನು, ಲುಕ್ಮಾನ್ ಬಂಟ್ವಾಳ, ಅಬ್ದುಲ್ ರವೂಫ್, ಅನಿಲ್ ಕುಮಾರ್, ಸದಾಶಿವ ಶೆಟ್ಟಿ,ಟಿಕೆ ಸುಧೀರ್, ಜಯಶೀಲಾ ಅಡ್ಯಂತಾಯ, ಶುಭೋದಯ ಆಳ್ವ, ನೀರಜ್ ಪಾಲ್, ಲಾವಣ್ಯ ಬಲ್ಲಾಳ್,ಪ್ರಕಾಶ್ ಸಾಲ್ಯಾನ್, ಬೇಬಿ ಪೂಜಾರಿ, ರಮಾನಂದ್ ಪೂಜಾರಿ, ಅಪ್ಪಿ, ಶಾಂತಲ ಗಟ್ಟಿ, ರಕ್ಷಿತ್ ಶಿವರಾಮ್,ಶಶಿಕಲಾ ಕದ್ರಿ, ಹೊನ್ನಯ್ಯ, ದುರ್ಗಾಪ್ರಸಾದ್,ನಿತ್ಯಾನಂದ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.