ಮಂಗಳೂರಿನ ಕೋಡಿಕಲ್ ನಲ್ಲಿ ನಾಗ ಬನದ ನಾಗ ದೇವರ ಕಲ್ಲನ್ನು ದುಷ್ಕರ್ಮಿಗಳು ಎಸೆದು ತುಳುನಾಡಿನ ಸಂಸ್ಕೃತಿಗೆ ಘೋರ ಅನ್ಯಾಯ ಮಾಡುತ್ತಿದ್ದಾರೆ, ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೈವಸ್ಥಾನ ಮತ್ತು ದೇವಸ್ಥಾನ ಕಾಣಿಕೆ ಡಬ್ಬಿಗಳಿಗೆ ಕಾಂಡೊಮ್ ಹಾಕುವುದು ಮತ್ತು ಇನ್ನಿತರ ದುಷ್ಕೃತ್ಯಗಳನ್ನು ಮಾಡುತ್ತಿದ್ದು ಇದನ್ನು ಕಾಂಗ್ರೆಸ್ ಪಕ್ಷದ ನಾಯಕರು ತೀವ್ರವಾಗಿ ಖಂಡಿಸಿದೆ ಮತ್ತು ಇಂದು ನಗರ ಪೊಲೀಸ್ ಉಪ ಆಯುಕ್ತ ರವರಿಗೆ ಕೆಪಿಸಿಸಿ ಸಂಯೋಜಕ ಇಂಟಕ್ ಕಾರ್ಯದರ್ಶಿ ಬೊಂಡಾಲ ಚಿತ್ತರಂಜನ್ ಶೆಟ್ಟಿ ಮತ್ತು ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗದ ಅಧ್ಯಕ್ಷರಾದ ವಿಶ್ವಾಸ್ ದಾಸ್ ಮತ್ತು ಯುವ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ರಮಾನಂದ ಪೂಜಾರಿರವರ ನೇತೃತ್ವದಲ್ಲಿ ಮನವಿ ಸಲ್ಲಿಸಿ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಕಾನೂನಿನ ಅಡಿಯಲ್ಲಿ ಶಿಕ್ಷೆ ನೀಡಬೇಕು ಮತ್ತು ಅವರನ್ನು ಜಿಲ್ಲೆಯಿಂದ ಗಡಿಪಾರು ಮಾಡಬೇಕು, ಮುಂದಿನ ದಿನಗಳಲ್ಲಿ ಇಂತಹ ಕೃತ್ಯ ಮರುಕಳಿಸದಂತೆ ಎಚ್ಚರಿಕೆ ನೀಡಬೇಕು ಎಂದು ಮನವಿ ಸಲ್ಲಿಸಲಾಯಿತು, ಈ ಸಂದರ್ಭದಲ್ಲಿ ಇಂಟಕ್ ನಾಯಕರಾದ ಉಮೇಶ್ ಕೊಟಿಯನ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಮೀನ ಟೆಲ್ಲಿಸ್, ಶೋಭಾ ಕೇಶವ್, ಮತ್ತು ಕಾಂಗ್ರೆಸ್ ನಾಯಕ ಭುವನ್ ಕರ್ಕೇರಾ, ರವಿ ಪೂಜಾರಿ ದಂಬೆಲ್, ಅಶೋಕ್ ಕೋಟ್ಯಾನ್ ಮೊದಲಾದ ನಾಯಕರು ಇದ್ದರು