ನಿತ್ಯ 900 ಮೆಟ್ರಿಕ್ ಟನ್ ಆಮ್ಲಜನಕ ಉತ್ಪಾದಿಸಿ ಪೂರೈಕೆ ಮಾಡುತ್ತಿರುವ ಟಾಟಾ ಸಂಸ್ಥೆಯು ಸಂಗ್ರಹಕ್ಕೆ ಅಗತ್ಯದ  60 ಕ್ರಯೋಜೆನಿಕ್ ಆಕ್ಸಿಜನ್ ಟ್ಯಾಂಕ್‌ಗಳನ್ನು ವಿದೇಶದಿಂದ ತರಿಸುತ್ತಿದೆ.

ಭಾರತದ ಸಣ್ಣ ಪಟ್ಟಣಗಳಲ್ಲಿ ಬೇಗನೆ ಟಾಟಾದವರು 400 ಆಮ್ಲಜನಕ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಯೋಜಿಸಿದ್ದಾರೆ.

ಟಾಟಾರವರ ಇಂಡಿಯನ್ ಹೋಟೆಲ್‌ಗಳ 1,500 ಬೆಡ್‌ಗಳನ್ನು ಹಾಗೂ ಅವರ ಕಂಪೆನಿಗಳ ಆರೋಗ್ಯ ಸೇವೆಗಳನ್ನು ಈಗಾಗಲೇ ಟಾಟಾ ಕೋವಿಡ್ ಹತೋಟಿಗೆ ಒದಗಿಸುತ್ತಿದೆ. 16 ನಗರಗಳಲ್ಲಿ ತಲಾ 100 ಬೆಡ್‌ಗಳ ವ್ಯವಸ್ಥೆಯನ್ನು ಸಹ ಟಾಟಾ ಮಾಡಲಿದೆ. ಸಾಧ್ಯವಿರುವ ಎಲ್ಲ ನೆರವನ್ನು ಕೊರೋನಾ ಸಾಂಕ್ರಾಮಿಕದ ವಿರುದ್ಧ ಹೋರಾಡಲು ಟಾಟಾ ಒದಗಿಸುವುದಾಗಿ ಟಾಟಾರವರ ಸಂಸ್ಥೆ ತಿಳಿಸಿದೆ.