ಮೆಕ್ಸಿಕೋದಲ್ಲಿ ಮೂರನೆಯ ಅಲೆ ಆರಂಭವಾಗಿದ್ದು, ಸೇಫ್ ಎಂದು ತಿಳಿದವರನ್ನು ಹೊಸ ಕೋವಿಡ್ ನರಳಿಸಲಾರಂಭಿಸಿದೆ.
ನಿನ್ನೆಯಿಂದ ದಿಢೀರನೆ ಸೋಂಕು ಮತ್ತು ಸಾವು ಎರಡೂ ಏರಿಕೆ ಕಂಡುದರಿಂದ ಮೆಕ್ಸಿಕೋ ಸರಕಾರ ಹೊಸ ಹತಾಶೆಯಿಂದ ಮತ್ತೆ ಕೊರೋನಾ ಹತೋಟಿಗೆ ಕೈ ಹಾಕಿದೆ.
ಇಂಡೋನೇಶಿಯಾ ಮತ್ತು ತೆಂಕಣ ಕೊರಿಯಾದಲ್ಲಿ ಕೊರೋನಾ ಇತ್ತಾದರೂ ತೀರಾ ಅಲ್ಪ ಪ್ರಮಾಣದಲ್ಲಿ ಮಾತ್ರ ತೊಂದರೆ ಇತ್ತು. ಆದರೆ ನಿನ್ನೆಯಿಂದ ಈ ಎರಡೂ ದೇಶಗಳಲ್ಲಿ ಕೊರೋನಾ ಹೊಸ ಹುರುಪಿನೊಡನೆ ಪ್ರವಾಸ ಮಾಡುತ್ತಿರುವುದು ಎರಡೂ ಸರಕಾರಗಳನ್ನು ವಿವಶವಾಗಿಸಿದೆ. ಈ ನಿಟ್ಟಿನಲ್ಲಿ ಲೋಕ ಆರೋಗ್ಯ ಸಂಸ್ಥೆಯು ಎಲ್ಲ ದೇಶಗಳನ್ನು ಎಚ್ಚರಿಸಿದೆ.
ಭಾರತದ ಕೆಲವೆಡೆ ಮೊನ್ನೆಯಿಂದ ಕೋವಿಡ್ ಮೂರನೆಯ ಅಲೆಯದೇ ಮಾತು. ಆದರೆ ತಜ್ಞರು ಅದನ್ನು ಖಚಿತ ಪಡಿಸಿಲ್ಲ. ಕಳೆದ ಒಂದು ವಾರದಿಂದ ಕೇರಳದಲ್ಲಿ ಇತರ ರಾಜ್ಯಗಳಿಗಿಂತ ಹೆಚ್ಚು ಪಾಸಿಟಿವ್ ಕಂಡು ಬರುತ್ತಿದೆ. ಮುಂದೆ ಸಾವು ಕೂಡ ಹಾಗಾದೀತೋ ಎಂಬ ಆತಂಕ ಇದೆ.