ಜಾರ್ಜಿಯಾದ 17ನೇ ಶತಮಾನದ ರಾಣಿ ಸೆಯೆಂಟ್ ಕೆಟೆವನ್‌ರಿಗೆ ಸಂಬಂಧಿಸಿದ ಹಳೆಯ ಪವಿತ್ರ ವಸ್ತುಗಳನ್ನು ಭಾರತವು ಶನಿವಾರ ಜಾರ್ಜಿಯಾ ಸರಕಾರಕ್ಕೆ ಒಪ್ಪಿಸಿತು.

ಈ ಪವಿತ್ರ ವಸ್ತುಗಳು 16 ವರುಷಗಳ ಹಿಂದೆ ಗೋವಾದಲ್ಲಿ ಪತ್ತೆಯಾಗಿ ಸುದ್ದಿಯಾಗಿತ್ತು. ಆಗಿನಿಂದಲೂ ಜಾರ್ಜಿಯಾ ಅದನ್ನು ಕೇಳುತ್ತಿದೆ. ಈಗ ವಿದೇಶಾಂಗ ಸಚಿವ ಜೈಶಂಕರ್ ಜಾರ್ಜಿಯಾಕ್ಕೆ ಹೋಗಿದ್ದು ಆ ಸಂದರ್ಭದಲ್ಲಿ ಸ್ನೇಹ ದ್ಯೋತಕವಾಗಿ ಅದನ್ನು ಹಿಂತಿರುಗಿದರು.