ಕೋಲಾರದ ಗಲ್ ಪೇಟೆ ಪೋಲೀಸರು ಮಹಿಳೆ ಸಹಿತ ಇಬ್ಬರನ್ನು ಕೊಲೆ ಆರೋಪದ ಮೇಲೆ ಬಂಧಿಸಿದ್ದಾರೆ.

ಕುವೆಂಪು ನಗರದ 40ರ ಝಕೀಯಾ, ಬೀದರ್ ಮೂಲದ 30ರ ಇಬ್ರಾಹಿಂ ಬಂಧಿತರು. ಕೊಲೆಯಾಗಿರುವ ವ್ಯಕ್ತಿ 30ರ ಜಬೀರ್.

ಪ್ರಾಂಶುಪಾಲೆ ಝಕೀಯಾ ಮದುವೆ ಆಗಿದ್ದೂ ಬಾಡಿ ಬಿಲ್ಡರ್ ಜಬೀರ್‌ನನ್ನು ಪ್ರೀತಿಸುತ್ತಿದ್ದಳು. ಆತ ಹಳೆಯ ಕಾರು ವ್ಯಾಪಾರ ನಡೆಸಲು ಧನಸಹಾಯ ಮಾಡಿದ್ದಳು. ಗಂಡನನ್ನು ಕೊಂದು ಆತನನ್ನು ಮದುವೆಯಾಗಲು ಫೇಸ್‌ಬುಕ್ ಮೂಲಕ ಬೀದರ್‌ನ ಇಬ್ರಾಹಿಂ ಸ್ನೇಹ ಬೆಳೆಸಿದ್ದಳು.

ಆದರೆ ಜಬೀರ್ ಝಕೀಯಾಳಿಗೆ ತಿಳಿಸದೆಯೇ ಬೇರೆ ಮದುವೆಯಾಗಿದ್ದ. ಇದರಿಂದ ಸಿಟ್ಟಾದ ಝಕೀಯಾ ಗಂಡನ ಬದಲು ಪ್ರಿಯಕರನನ್ನೇ ಸುಪಾರಿ ನೀಡಿ ಕೊಲ್ಲಿಸಿದ್ದಾಳೆ.

ಹಣ ವಸೂಲಿಗೆ ಇಬ್ರಾಹಿಂ ಜೊತೆಗೆ ಜಬೀರ್‌ನನ್ನು ಹೈದರಾಬಾದ್‌ಗೆ ಕಳುಹಿಸಿದ್ದಾಳೆ. ದಾರಿಯಲ್ಲಿ ಒಂಬತ್ತು ನಿದ್ರೆ ಮಾತ್ರೆ ಹಾಕಿ ಇಬ್ರಾಹಿಂ ಜಬೀರ್‌ಗೆ ಚಹ ಕುಡಿಸಿದ್ದಾನೆ. ಬಳಿಕ ದಾರಿಯ ನಿರ್ಜನ ಪ್ರದೇಶದಲ್ಲಿ ತಲೆಗೆ ಶಲಾಕೆಯಿಂದ ಹೊಡೆದು ಹೊಂಡಕ್ಕೆ ತಳ್ಳಿ ಬಂದಿದ್ದಾನೆ. ಪೋಲೀಸರು ಫೋನ್ ಮಾಹಿತಿ ಮೇಲೆ ಕೊಲೆ ಗುಟ್ಟು ರಟ್ಟು ಮಾಡಿದ್ದಾರೆ.