ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹದ ಮೇಲೆ ಶನಿವಾರ ನಸುಕಿನಲ್ಲಿ ಸಿಸಿಬಿ ಪೋಲೀಸರು ದಾಳಿ ಮಾಡಿ ಮೊಬಾಯಿಲ್, ಗಾಂಜಾ, ಚಾಕು, ಸಿಮ್ ಕಾರ್ಡ್ ಇತ್ಯಾದಿ ವಶಪಡಿಸಿಕೊಂಡರು.

ಈ ಬಗೆಗೆ ದೂರು ಬಂದುದರಿಂದ ನಸುಕಿನಲ್ಲಿ ದಾಳಿ ನಡೆಯಿತು. ಸೆರೆಯಾಳುಗಳು ಮೊಬಾಯಿಲ್ ಮೂಲಕ ಜೈಲಿನಿಂದಲೆ ಸಂಚು ನಡೆಸುತ್ತಿರುವುದು ತಿಳಿದು ಬಂದಿದೆ. ಸೆರೆಮನೆಯೊಳಕ್ಕೆ ಗಾಂಜಾ ಬರುವುದೆಲ್ಲಿಂದ, ಜೈಲು ಸಿಬ್ಬಂದಿಯ ವಿಚಾರಣೆ ಅಗತ್ಯವಿದೆ ಎಂದು ಸಿಸಿಬಿ ಪೋಲೀಸರು ತಿಳಿಸಿದ್ದಾರೆ.