ವರದಿ ರಾಯಿ ರಾಜಕುಮಾರ ಮೂಡುಬಿದಿರೆ


ಮೂಡುಬಿದಿರೆ ಆಳ್ವಾಸ್ ಆಯುರ್ವೇದ ಆಸ್ಪತ್ರೆಯ ವಿಭಾಗ ಮಾರ್ಕೆಟ್ ಸಮೀಪದ ಸಹಚರದಲ್ಲಿ ಸೊರಿಯಾಸಿಸ್ ನ ಉಚಿತ ಚಿಕಿತ್ಸೆ ಸಪ್ಟಂಬರ್ 12ರಂದು ಉದ್ಘಾಟಿಸಲ್ಪಟ್ಟಿತು. ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅಲಂಗಾರು ದುರ್ಗಾ ಕ್ಲಿನಿಕ್ ನ ಡಾ ಲೀಲಾ ಭಟ್ ಮಾತನಾಡಿ ಜನರಿಗೆ ಉಚಿತವಾಗಿ ಚಿಕಿತ್ಸೆಯನ್ನು ನೀಡುತ್ತಿರುವುದು ಬಹಳ ಉತ್ತಮವಾದ ಕೆಲಸ ಅಂತಹ ಕಾರ್ಯದಿಂದ ಪ್ರಯತ್ನಕ್ಕೆ ಬೆಲೆ ಸಿಗುತ್ತದೆ. ಸಾಮಾನ್ಯ ಜನರಿಗೆ ಇದು ಕಾಯಿಲೆ ಬಗೆಗೆ ತಿಳಿಯಲು ಉತ್ತಮವಾದಂತಹ ಅವಕಾಶವನ್ನು ನೀಡುವುದು ಎಂದರು.

ಆತ್ಮ ರಿಸರ್ಚ್ ಡೈರೆಕ್ಟರ್ ಡಾ ಸುಬ್ರಹ್ಮಣ್ಯ ಪದ್ಯಾಣ ಸ್ವಾಗತಿಸಿದರು. ಪ್ರಾಂಶುಪಾಲ ಡಾ ಸಜಿತ್ ಎಂ ಅಧ್ಯಕ್ಷತೆ ವಹಿಸಿದ್ದರು. ಮೆಡಿಕಲ್ ಸೂಪರಿಂಟೆಂಡೆಂಟ್ ಡಾ ಮಂಜುನಾಥ ಭಟ್, ಸಹಾಯಕ ಡಾ ವಿಕ್ರಂ, ಡಾ ಫರ್ಹಾನ್ ಝಮೀರ್, ಡಾ ರಾಯಿ ರಜತ್ ಕುಮಾರ್ ಉಪಸ್ಥಿತರಿದ್ದರು. ಮೆಡಿಕಲ್ ಡೈರೆಕ್ಟರ್ ಡಾ ಸುರೇಖಾ ಪೈ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.