ಮಂಗಳೂರು, ಜು. 7: ಫಾದರ್ ಮುಲ್ಲರ್‍ಅಲೈಡ್ ಹೆಲ್ತ್ ಸಾಯನ್ಸ್ನ ಫಿಸಿಯೋಥೆರಪಿ ವಿಭಾಗದ ವತಿಯಿಂದಇಂದು `ಕೋವಿಡ್ 19 ಬಳಿಕ ಸಹಜ ಸ್ಥಿತಿಯತ್ತ' ಎಂಬ ವೀಡಿಯೋವನ್ನು ಫಾದರ್ ಮುಲ್ಲರ್‍ಚಾರಿಟೆಬಲ್ ಸಂಸ್ಥೆಯ ನಿರ್ದೇಶಕರಾದರೆ. ಫಾ.ರಿಚರ್ಡ್ ಅಲೋಶಿಯಲ್ ಕುವೆಲ್ಲೋ ಅಧ್ಯಕ್ಷತೆಯಲ್ಲಿ ಅನಾವರಣಗೊಳಿಸಲಾಯಿತು.
ಈ ಸಂದರ್ಭ ಮಾತನಾಡಿದರೆ.ಫಾ. ರಿಚರ್ಡ್ ಅಲೋಶಿಯಸ್ ಕುವೆಲ್ಲೋ, ಕೋವಿಡ್ 19 ಸಮಾಜದಲ್ಲಿ ಸಾಕಷ್ಟು ಸಾವು ನೋವುಗಳಿಗೆ ಕಾರಣವಾಗಿದೆ. ಇದೀಗ ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡವರ ದೇಹವನ್ನು ಸಹಜ ಸ್ಥಿತಿಗೆ ತರುವಲ್ಲಿ ಫಿಸಿಯೋಥೆರಪಿ ಪಾತ್ರ ಪ್ರಮುಖವಾಗಿದೆಎಂದರು.
ಕೋವಿಡ್ ಸೋಂಕಿತರು ಗುಣಮುಖರಾದ ಬಳಿಕ ಫಿಸಿಯೋಥೆರಪಿ ಮೂಲಕ ಅಗತ್ಯ ವ್ಯಾಯಾಮವನ್ನು ದೇಹಕ್ಕೆ ಒದಗಿಸುವ ನಿಟ್ಟಿನಲ್ಲಿ ರಚಿಸಲಾದ ಈ ವೀಡಿಯೋ ಅತ್ಯಂತ ಉಪಯುಕ್ತ ಮಾಹಿತಿಯನ್ನು ಒಳಗೊಂಡಿದ್ದು, ಇದನ್ನು ಜನಸಾಮಾನ್ಯರಿಗೂ ಅರ್ಥ ಮಾಡಿಸುವಲ್ಲಿ ಪ್ರಯತ್ನಿಸಬೇಕೆಂದು ಸಲಹೆ ನೀಡಿದರು.
ಸಂಸ್ಥೆಯಕೌನ್ಸಿಲ್ ಹಾಲ್ನಲ್ಲಿ ನಡೆದಕಾರ್ಯಕ್ರಮದಲ್ಲಿ ಫಾದರ್ ಮುಲ್ಲರ್ ಮೆಡಿಕಲ್‍ಕಾಲೇಜಿನ ಆಡಳಿತಾಧಿಕಾರಿ ರೆ.ಫಾ. ಅಜಿತ್ ಮಿನೇಜಸ್, ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ಆಡಳಿತಾಧಿಕಾರಿ ರೆ.ಫಾ. ರುಡಾಲ್ಫ್‍ರವಿ ಡೆಸಾ, ಸಹಾಯಕ ಆಡಳಿತಾಧಿಕಾರಿಗಳಾದ ಫಾ. ಜೀವನ್ ಸಿಕ್ವೇರಾ, ಫಾ.ನೆಲ್ಸನ್ ಪಾಯಸ್, ಅಲೈಡ್ ಹೆಲ್ತ್ ಸಾಯನ್ಸ್ ಕಾಲೇಜಿನ ಡೀನ್ ಡಾ. ಆಯಂಟನಿ ಸಿಲ್ವನ್ ಡಿಸೋಜಾ, ಫಿಸಿಯೋಥೆರಪಿ ವಿಭಾಗದ ಮುಖ್ಯಸ್ಥರಾದ ಪ್ರೊಫೆಸರ್. ಸಿಡ್ನಿ ರೆಬೆಲ್ಲೋ, ಡಾ.ಉದಯ್‍ಕುಮಾರ್, ಡಾ. ಕಿಶನ್ ಶೆಟ್ಟಿ, ಸಿಸ್ಟರ್ ಜಾನೆಟ್ ಮೊದಲಾದವರು ಉಪಸ್ಥಿತರಿದ್ದರು.
16 ನಿಮಿಷಗಳ ವೀಡಿಯೋವನ್ನು ಫಿಸಿಯೋಥೆರಪಿ ವಿಭಾಗದಕಾರ್ಡಿಯೋರೆಸ್ಪಿರೇಟರಿ ಘಟಕದ ಮುಖ್ಯಸ್ಥೆರ. ಚೆರಿಷ್ಮಾ ಡಿಸಿಲ್ವಾ ನಿರ್ದೇಶಿಸಿದ್ದು, ವೀಡಿಯೋದಲ್ಲಿ ಕೋವಿಡ್ನಿಂದ ಗುಣಮುಖ ಹೊಂದಿದ ರೋಗಿಗಳಿಗೆ ಅಗತ್ಯವಾದ ವ್ಯಾಯಾಮಗಳ ಬಗ್ಗೆ ಮಾಹಿತಿ ನೀಡಲಾಗಿದೆ.
ಫಿಸಿಯೋಥೆರಪಿ ವಿಭಾಗದ ಸಹಾಯಕ ಪ್ರೊಫೆಸರ್ ಅಷ್ಮಿತಾ ಕಾರ್ಯಕ್ರಮ ನಿರೂಪಿಸಿದರು.