ಅಪ್ಪ ಅಂದರೇನೇ ದೊಡ್ಡ ಶಕ್ತಿ ಗತ್ತು ಗಾಂಭೀರ್ಯ ದೊಡ್ಡ ಜವಾಬ್ಧಾರಿ ಅಮ್ಮ ಎಲ್ಲಾವನ್ನು ತೋರಸಿಕೊಳ್ಳುತ್ತಾಳೆ ಆದರೆ ಅಪ್ಪ ಏನು ತೋರಸಿಕೊಳ್ಳಲ್ಲ ನೋವುಗಳನ್ನ ತೋರಸಿಕೊಂಡರೆ ಎಲ್ಲಿ ನನ್ನ ಹೆಂಡತಿ ಮಕ್ಕಳು ನೋವುಪಡುತ್ತಾರೆ ಅಂತಾನೂ ಮತ್ತೇ ಎಲ್ಲಿ ಸಮಾಜ ಗೇಲಿ ಮಾಡತ್ತೇ ಅಂತಾನೂ ಯಾವುದನ್ನೂ ತೋರಿಸಿಕೊಳ್ಳಲ್ಲ ಹೇಳಿಕೊಳಲ್ಲ ಅಳು ಬಂದರು ಅಳೋದಿಲ್ಲ ಎಲ್ಲಾ ಆಸೆ ನೋವುಗಳನ್ನ ತನ್ನೊಳಗೆ ಬಚ್ಚಿ ಇಟ್ಟುಕೊಳ್ಳುವವನು ಅಪ್ಪ .ಮಕ್ಕಳು ಏನೇ ತಪ್ಪು ಮಾಡಿದರೂ ಸಮಾಜ ಕೇಳೋದು ಒಂದೇ ಮಾತು ಅಮ್ಮ ಅಪ್ಪ ಏನ್ ಕಲಿಸಿದರು ಅಂತಾ ಅಂದರೆ ಸಮಾಜಕ್ಕೆ ಮಗು ಉತ್ತಮ ವ್ಯಕ್ತಿ ಆಗಿ ಬರಬೇಕಾದರೆ ಅಪ್ಪ ಅಮ್ಮನ ಶ್ರಮವೇ ಹೆಚ್ಚಾಗಿರತ್ತೇ ಅಂತಾ ಸಾಧನೆ ಮಾಡಿದ ಅದೆಷ್ಟೋ ಸಾಧಕರಿಗೆ ಅವರ ಅಪ್ಪನೇ ರೋಲ್ ಮಾಡೆಲ್ ಆಗಿರುತ್ತಾರೆ ಕಾರಣ ಅಪ್ಪನ ಶ್ರಮ ಪೋತ್ಸಾಹ ಇಲ್ಲದೆ ಸಾಧನೆ ಮಾಡುವವರು ವಿರಳ.ಅಪ್ಪ ಅಧ್ಭುತವಾದ ಶ್ರೇಷ್ಠವಾದ ಸಂಬಂಧ ಹಿಂದೆ ಎಲ್ಲಾ ತುಂಬಾ ಕಟ್ಟುನಿಟ್ಟಾಗಿದ್ದ ಅಪ್ಪ ಇಂದು ತುಂಬಾ ಸ್ವತಂತ್ರ ನೀಡಿದ್ದಾನೆ ಎಷ್ಟು ಅಂತಾ ಕೇಳಿದರೆ ಓದಲಿಕ್ಕೆ ಆಗಲಿ ಉದ್ಯೋಗಕ್ಕೆ ಆಗಲಿ ಸಂಗಾತಿಯನ್ನ ಆಯ್ಕೆ ಮಾಡಿಕೊಳ್ಳಲ್ಲಿಕ್ಕೆ ಆಗಲಿ ಮಕ್ಕಳ ಆಯ್ಕೃನ್ನೇ ಅಪ್ಪ ಒಪ್ಪಕೊಳ್ಳತ್ತಾನೆ.ಹಿಂದೆ ಅಪ್ಪ ಅಂದರೆ ಭಯ ಮಕ್ಕಳು ತುಂಬಾ ದೂರ ಇರತ್ತಾ ಇಂದರು ಮಾತು ಕೂಡಾ ಅಪ್ಪನ ಜೊತೆಗೆ ತುಂಬಾ ಕಡಿಮೆನೇ ಆದರೆ ಇಂದು ಹಾಗಲ್ಲ ಅಪ್ಪ ಅಂದರೇನೇ ಬೆಸ್ಟ್ ಫ್ರೆಂಡ್ ಹಿತೈಷಿ ಎಲ್ಲಾವೂ ಅವನೇ ಆಗಿರುತ್ತಾನೆ. 

ಅಮ್ಮ ಜೀವ ಕೊಡುತ್ತಾಳೆ ಅಪ್ಪ ಬಾಳು ಕೊಡುತ್ತಾನೆ ಎಂಬ ಮಾತಿದೆ. ಬಾಳು ಕೊಡುವ ಅಪ್ಪನನ್ನು ಮಕ್ಕಳು ಕೆಲವೊಮ್ಮೆ ಗೋಳಾಡಿಸುವುದೇಕೆ ಎಂಬುದಕ್ಕೆ ಉತ್ತರ ಸಿಗದೇ ಇರಬಹುದು. ಮಕ್ಕಳಿಗೆ ಅಪ್ಪನೇ ಆಕಾಶ ಅಪ್ಪನಿಗೆ ಅಪ್ಪನೇ ಸಾಟಿ.ಅಪ್ಪ ಕೆಲವೊಮ್ಮೆ ಅಮ್ಮನೂ ಆಗಿಬಿಡಬಲ್ಲ.ಜನಕ ಮಹಾರಾಜ ಸೀತಾಮಾತೆಯನ್ನು ಮದುವೆ ಮಾಡಿ ರಾಮರ ಸಂಗಡ ಕಳುಹಿಸುವಾಗ ಒಂದು ಕೋಣೆಯ ತುಂಬಾ ಅರಿಶಿನ ಹರಡಿ ‘ಇದರ ಮೇಲೆ ನಿನ್ನ ಹೆಜ್ಜೆ ಗುರುತನ್ನು ಮೂಡಿಸಿ ಹೋಗು. ಇದರ ನೆನಪಲ್ಲಿ ಮಗಳೇ ನೀನಿಲ್ಲದ ಕೊರಗನ್ನು ಮರೆಯುತ್ತೇನೆ’ ಎಂದಿದ್ದನಂತೆ.ಹೆಣ್ಣು ಮಕ್ಕಳಿಗೂ ಅಪ್ಪನಿಗೂ ತುಂಬಾ ಆತ್ಮೀಯವಾದ ನಂಟಿಯಿದೆ ಅಂದರೂ ತಪ್ಪಾಗಲ್ಲಿಕ್ಕಿಲ್ಲ.

ಅಪ್ಪಂದಿರ ದಿನ'ವನ್ನು ಮೊದಲ ಬಾರಿಗೆ 19 ಜೂನ್‌ 1910ರಲ್ಲಿ ಅಮೆರಿಕದ ವಾಷಿಂಗ್ಟನ್‌ನಲ್ಲಿ ಆಚರಿಸಲಾಗಿತ್ತು. 1916ರಲ್ಲಿ ಅಮೆರಿಕ ಅಧ್ಯಕ್ಷ ವುಡ್ರೋ ವಿಲ್ಸನ್ ತಂದೆಯ ಸೇವೆಗಳನ್ನು ಸ್ಮರಿಸಿ ಎಲ್ಲ ತಂದೆಯಂದಿರಿಗೂ ಶುಭಾಶಯ ತಿಳಿಸುತ್ತಾರೆ. 1966ರಲ್ಲಿ ಅಧ್ಯಕ್ಷ ಲಿಂಡನ್ ಬಿ. ಜಾನ್ಸನ್ ಜೂನ್ ಮೂರನೇ ಭಾನುವಾರವನ್ನು 'ವಿಶ್ವ ಅಪ್ಪಂದಿರ ದಿನ'ವೆಂದು ಘೋಷಣೆ ಮಾಡಿ ಸಹಿ ಹಾಕುವ ಮೂಲಕ ಅಧಿಕೃತವಾಗಿ 'ಅಪ್ಪಂದಿರ ದಿನ'ವನ್ನು ಚಾಲ್ತಿಗೆ ತರುತ್ತಾರೆ.ಅಮ್ಮನಿಗಾಗಿ ಹೇಗೆ ಒಂದು ದಿನ ಇದೀಯೋ ಹಾಗೇಯೇ ಅಪ್ಪಾನಿಗಾಗಿ ಒಂದು ದಿನವಿದೆ. ಭಾರತದ ಸಂಪ್ರದಾಯವೂ ಹೇಳುತ್ತದೇ ತಂದೆತಾಯಿಯ ಋಣ ತೀರಿಸೋದು ಸಾಧ್ಯವಿಲ್ಲ ಆದರೂ ತಂದೆ ತಾಯಿಯ ಋಣವನ್ನ ಅಲ್ಪ ಸಲ್ಪವಾದರೂ ತೀರಿಸಿಕೊಳ್ಳಬೇಕು ಅಂತಾ ಅಪ್ಪನ  ಬಗ್ಗೆ ಬರೆದರೆ ಪದಗಳೇ ಸಾಲಲ್ಲಾ ಮುಗಿಯುದೋ ಇಲ್ಲ ನಮಗೋಸ್ಕರ ಎಲ್ಲಾ ಮಾಡಿದ ಎಲ್ಲಾರ ಅಪ್ಪಂದಿರಿಗೂ ಒಂದು ಕೃತಜ್ಞತೇನ ಸಲ್ಲಿಸೋಣ .

ನಾನು ನೋಡಿದ ಮೊದಲ ವೀರ, ಬಾಳು ಕಲಿಸಿದ ಸಲಹೆಗಾರ, ಬೆರಗು ಮೂಡಿಸೋ ಜಾದುಗಾರ ಅಪ್ಪ, ಹಗಲು ಬೆವರಿನ ಕೂಲಿಕಾರ, ರಾತ್ರಿ ಮನೆಯಲಿ ಚೌಕಿದಾರ, ಎಲ್ಲಾ ಕೊಡಿಸುವ ಸಾಹುಕಾರ ಅಪ್ಪ... ಗದರೋ ಮೀಸೆಗಾರ, ಮನಸೇ ಕೋಮಲಾ... ನಿನ್ನಾ ಹೋಲೋ ಕರ್ಣಯಾರಿಲ್ಲ ಅಪ್ಪ ಐ ಲವ್ ಯೂ ಅಪ್ಪ...


ರೇಷ್ಮಾ